Ad Widget .

ಪ್ರಿಯಕರನ ಜೊತೆ ಮಾತನಾಡಲು ಅಡ್ಡಿಯಾಗುತ್ತದೆ ಎಂದು 4 ವರ್ಷದ ಮಗುವಿಗೆ ಪಾತ್ರೆ ತೊಳೆಯಲು ಬಿಟ್ಟ ಪಾಪಿ ತಾಯಿ

ಸಮಗ್ರ ನ್ಯೂಸ್: ಪ್ರಿಯತಮನ ಆಸೆಗಾಗಿ ಮಕ್ಕಳಿಗೆ ಕೆಲಸಕೊಟ್ಟು ಪ್ರಿಯತಮನ ಜೊತೆ ಮಾತನಾಡುವ ಅಮಾನವೀಯ ಘಟನೆ ಚಿಕ್ಕಮಗಳೂರಿನ ಶಂಕರಮಠದಲ್ಲಿ ನಡೆದಿದೆ.

Ad Widget . Ad Widget .

ಪ್ರಿಯಕರನ ಜೊತೆ ಮಾತನಾಡಲು ಅಡ್ಡಿಯಾಗುತ್ತದೆ ಎಂದು ಪ್ರಿಯತಮನ ಮನೆಯಲ್ಲಿ ಮಗನಿಗೆ ಪಾತ್ರೆ ತೊಳೆಯಲು ಬಿಟ್ಟಿದ್ದಾಳೆ ಈ ಪಾಪಿ ತಾಯಿ. 4 ವರ್ಷದ ಈ ಮಗು ದಿನ ಪಾತ್ರೆ ತೊಳೆಯುತ್ತಿದೆಯಂತೆ. ಮಗುವಿನ ಕಷ್ಟ ನೋಡಲಾರದೆ ಸ್ಥಳೀಯರು ವಿಡಿಯೋ ಮಾಡಿದ್ದಾರೆ.

Ad Widget . Ad Widget .

ಪತಿ ಇದ್ದರು ಈ ನೇತ್ರಾವತಿ ಪ್ರಿಯಕರನೊಂದಿಗೆ ಲವ್ವಿಡವ್ವಿ ಆಡುತ್ತಿದ್ದಳಂತೆ.11 ವರ್ಷಗಳ ಹಿಂದೆ ಈಕೆಗೆ ಶಿವು ಜೊತೆ ವಿವಾಹವಾಗಿತ್ತು. ಈಕೆಯ ಅನೈತಿಕ ಸಂಬಂಧದಿಂದ ಶಿವು ಬೇಸತ್ತಿದ್ದರು. ಆದರೆ ಪ್ರಿಯಕರನ ಮನೆಯಲ್ಲಿ ಮಗು ಪಾತ್ರೆ ತೊಳೆಯುವುದನ್ನ ನೋಡಿ ಶಿವುಗೆ ಆಘಾತವಾಗಿದೆ. ಇದರಿಂದ ಬೇಸತ್ತ ಶಿವು ಆತ್ಮಹತ್ಯೆಗೂ ಯತ್ನ ಮಾಡಿದ್ದಾರೆ.

ಶಿವು, ನೇತ್ರಾವತಿ ಮಧ್ಯೆ ಮನಸ್ಥಾಪವಾದಾಗ ಗಂಡನನ್ನು ಬಿಟ್ಟು ನೇತ್ರಾವತಿ ಮೈಸೂರಿನ ಪ್ರಿಯಕರನ ಮನೆಗೆ ಹೋಗಿದ್ದಾಳೆ. ಪ್ರಶ್ನಿಸಲು ಹೋದ ಶಿವು ತಾಯಿ ಮೇಲೆ ನೇತ್ರಾವತಿ ಗಂಭೀರವಾಗಿ ಹಲ್ಲೆಮಾಡಿದ್ದಾಳೆ.

Leave a Comment

Your email address will not be published. Required fields are marked *