Ad Widget .

ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆ/ ಜೂನ್ 14 ರವರೆಗೆ ಅವಧಿ ವಿಸ್ತರಣೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಗುರುತು ಚೀಟಿ ಪ್ರಾಧಿಕಾರವು (ಆಧಾರ್ ಪ್ರಾಧಿಕಾರ) ಆಧಾರ್ ಕಾರ್ಡ್ ಉಚಿತ ಪರಿಷ್ಕರಣೆಗಾಗಿ ಇದ್ದ ಅವಧಿಯನ್ನು ಜೂನ್ 14 ರವರೆಗೆ ವಿಸ್ತರಿಸಿ ಹೊಸ ಆದೇಶ ಹೊರಡಿಸಿದೆ.

Ad Widget . Ad Widget .

ಈ ಹಿಂದೆ ಉಚಿತವಾಗಿ ಆಧಾರ್ ನವೀಕರಣ ಮಾಡಿಕೊಳ್ಳಲು ಮೈ ಆಧಾರ್ ಪೋರ್ಟಲ್‍ನಲ್ಲಿ ಡಿಸೆಂಬರ್ 14 ಕೊನೆ ದಿನ ನಿಗದಿ ಮಾಡಲಾಗಿತ್ತು. ನಂತರ ಶುಲ್ಕ ಸಹಿತ ನವೀಕರಣಕ್ಕೆ ಅವಕಾಶವಿತ್ತು. ಆದರೆ ಈಗ ಉಚಿತ ನವೀಕರಣ ಅವಧಿಯನ್ನು ಜೂ.14 ರವರೆಗೆ ವಿಸ್ತರಿಸಿದೆ. ಈ ಸೇವೆಯು ಮೈಆಧಾರ್ ಪೋರ್ಟಲ್‍ನಲ್ಲಿ ಮಾತ್ರ ಲಭ್ಯವಿದೆ. ಆಧಾರ್ ಕಚೇರಿಗಳಿಗೆ ನವೀಕರಣಕ್ಕೆ ಹೋದರೆ ನಿಗದಿತ ಶುಲ್ಕ ನೀಡಬೇಕು ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

Ad Widget . Ad Widget .

Leave a Comment

Your email address will not be published. Required fields are marked *