Ad Widget .

ಉಡುಪಿ: ಬೆಳ್ಳಿ ಆಭರಣ ಮಳಿಗೆಗೆ ಮ್ಯಾನೇಜರ್‌ನಿಂದ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್: ಉಡುಪಿ ಒಳಕಾಡಿನಲ್ಲಿರುವ ಬೆಳ್ಳಿಯ ಆಭರಣಗಳ ಅಂಗಡಿಯ ಮ್ಯಾನೇಜರ್ ವಿಶಾಲ್ ಎಂಬಾತನು ತನ್ನ ಸಂಸ್ಥೆಗೆ ಲಕ್ಷಾಂತರ ರೂ. ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ.

Ad Widget . Ad Widget .

ಸೆ.25ರಂದು ಈತನ ಬಗ್ಗೆ ಅನುಮಾನಗೊಂಡು ಸಂಸ್ಥೆಯ ಮಾಲಕರು ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಆರೋಪಿಯು 17 ಲ.ರೂ.ಮೌಲ್ಯದ 25 ಕೆಜಿ 980 ಗ್ರಾಂ ತೂಕದ ಬೆಳ್ಳಿಯ ಬಗ್ಗೆ ಮೋಸ ಮಾಡಿ ನಷ್ಟ ಉಂಟು ಮಾಡಿದ್ದ. ಈ ಬಗ್ಗೆ ಆತನನ್ನು ದೂರವಾಣಿ ಮೂಲಕ ವಿಚಾರಿಸಿದಾಗ ತಪ್ಪನ್ನು ಒಪ್ಪಿಕೊಂಡು 10 ಲ.ರೂ.ಗಳನ್ನು ಮಾಲಕರಿಗೆ ನೀಡಿದ್ದ. ಬಳಿಕ ಉಳಿದ ಹಣವನ್ನು ಕೇಳಿದಾಗ ತಾನು ಯಾವುದೇ ಹಣ ಕೊಡಲಿಕ್ಕಿಲ್ಲ ಎಂದಿದ್ದ. ಅನಂತರ ತಾನು ನೀಡಿದ್ದ 10 ಲ.ರೂ.ಗಳನ್ನು ಹಿಂದಿರುಗಿಸಬೇಕೆಂದು ಹೇಳಿದ್ದಲ್ಲದೆ, ಜೀವ ಬೆದರಿಕೆಯನ್ನೂ ಒಡ್ಡಿರುವುದಾಗಿ ಸಂಸ್ಥೆಯ ಲತಿಕಾ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *