Ad Widget .

ಪಡುಬಿದ್ರಿ : ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಇಬ್ಬರು ಬಾಲಕಾರ್ಮಿಕರ ರಕ್ಷಣೆ

ಸಮಗ್ರ ನ್ಯೂಸ್ : ಸಂತೆಯಲ್ಲಿ ಬಾಲಕಾರ್ಮಿಕರು ಹಾಗೂ ಭಿಕ್ಷಾಟನೆ ನಡೆಸುತ್ತಿರುವವರ ಬಗ್ಗೆ ಮಾಹಿತಿ ಪಡೆದ ಕಾಪು ತಹಶೀಲ್ದಾರ್ ಡಾ| ಪ್ರತಿಭಾ ಆರ್. ಅವರು ಮಕ್ಕಳ ರಕ್ಷಣ ಘಟಕ ಸಿಬ್ಬಂದಿ ಸಹಕಾರದೊಂದಿಗೆ ದಿಢೀರ್ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕಾರ್ಮಿಕರನ್ನು ರಕ್ಷಿಸಿದರು.

Ad Widget . Ad Widget .

ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾಗ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಇಬ್ಬರು ಬಾಲಕಾರ್ಮಿಕರು ಪತ್ತೆಯಾದರು. ಇದೇ ವೇಳೆ ಮಕ್ಕಳನ್ನು ಬಳಸಿ ಭಿಕ್ಷಾಟನೆ ನಡೆಸುತ್ತಿರುವುದೂ ಕಂಡು ಬಂದಿದ್ದು, ಅವರು ಅಧಿಕಾರಿಗಳನ್ನು ನೋಡಿ ಅಲ್ಲಿಂದ ಪರಾರಿಯಾದರು.

Ad Widget . Ad Widget .

ಪತ್ತೆಹಚ್ಚಲಾದ ಬಾಲ ಕಾರ್ಮಿಕರನ್ನು ಮಕ್ಕಳ ರಕ್ಷಣಾ ಘಟಕವು ಮಕ್ಕಳ ಕಲ್ಯಾಣ ಸಮಿತಿ ಮೂಲಕ ಬಾಲಮಂದಿರಕ್ಕೆ ಒಪ್ಪಿಸಲಾಗುವುದು. ಅಲ್ಲಿ ಅವರಿಗೆ ಪುನರ್ವಸತಿ ಕಲ್ಪಿಸುವುದರ ಜತೆಗೆ, ಅವರ ಪಾಲಕರನ್ನು ಕರೆಸಿ ಜಾಗೃತಿ ಮೂಡಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣ ಅಧಿಕಾರಿ ಕಪಿಲಾ, ಸಮಾಜ ಕಾರ್ಯಕರ್ತೆ ಸುರಕ್ಷಾ , ಯೋಗೀಶ್, ಸಂದೇಶ್ ಜತೆಗಿದ್ದರು.

Leave a Comment

Your email address will not be published. Required fields are marked *