ಪುತ್ತೂರು: ಮಹಿಳೆಯ ಖಾತೆಯಿಂದ ಹಣ ವಂಚನೆ- ದೂರು ದಾಖಲು..!

ಸಮಗ್ರ ನ್ಯೂಸ್ : ಮಹಿಳೆಯೋರ್ವರ ಖಾತೆಯಿಂದ ಅಪರಿಚಿತ ವ್ಯಕ್ತಿ ಯಾವುದೋ ರೀತಿಯಲ್ಲಿ ವಂಚಿಸಿ ಹಣವನ್ನು ಪಡೆದುಕೊಂಡ ಘಟನೆ ಚಿಕ್ಕಮಡ್ನೂರು ಗ್ರಾಮ ಪುತ್ತೂರಿನಲ್ಲಿ ನಡೆದಿದೆ.

Ad Widget ... ..

ಚಿಕ್ಕಮಡ್ನೂರು ಗ್ರಾಮ ,ಪುತ್ತೂರು ನಿವಾಸಿ ಐಡಾ ಶಾಂತಿ ಲೋಬೊ (43) ಎಂಬವರ ದೂರಿನಂತೆ, ಪುತ್ತೂರಿನ ದರ್ಬೆ ಎಂಬಲ್ಲಿರುವ ಯೂನಿಯನ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಖಾತೆಯಿಂದ ದಿನಾಂಕ 02-02-2024 ರಂದು ರಾತ್ರಿ ಸಮಯ ರೂ 13,000/- ಹಣ ಕಡಿತಗೊಂಡಿರುವ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿರುತ್ತದೆ.

Ad Widget

ಮಹಿಳೆಯ ಖಾತೆಯಿಂದ ಯಾರೋ ಅಪರಿಚಿತ ವ್ಯಕ್ತಿ ಯಾವುದೋ ರೀತಿ ವಂಚಿಸಿ ಹಣವನ್ನು ಪಡೆದುಕೊಂಡಿರುತ್ತಾರೆ. ಈ ಬಗ್ಗೆ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂ: 21/2024 ಕಲಂ:420 ಐ ಪಿ ಸಿ ಮತ್ತು 66(ಸಿ), 66(ಡಿ ) ಐ ಟಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *