ಸಮಗ್ರ ನ್ಯೂಸ್: ಬೃಹತ್ ಪ್ರಮಾಣದಲ್ಲಿ ನೀರನ್ನು ಬಳಸುವ ಕಂಪನಿಗಳು, ಆಸ್ಪತ್ರೆಗಳು, ರೈಲ್ವೆ, ವಿಮಾನ ನಿಲ್ದಾಣಗಳಿಗೆ 20% ರಷ್ಟು ನೀರು ಪೂರೈಕೆಯನ್ನು ಕಡಿತಗೊಳಿಸುವ ಮೂಲಕ ರಾಜಧಾನಿಯಲ್ಲಿನ ಕುಡಿಯುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಬೆಂಗಳೂರು ನೀರು ಸರಬರಾಜು ಮಂಡಳಿ ನಿರ್ಧರಿಸಿದೆ.
ಮಂಡಳಿಯು ಬೆಂಗಳೂರಿನಲ್ಲಿ ದೊಡ್ಡ ನೀರು ಸರಬರಾಜು ಜಾಲಗಳನ್ನು ಹೊಂದಿರುವ ಗ್ರಾಹಕರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದು, ಬೃಹತ್ ಪ್ರಮಾಣದಲ್ಲಿ ನೀರನ್ನು ಪಡೆಯುವ 3 ಲಕ್ಷ ಸಂಸ್ಥೆಗಳಿದ್ದು ಏಪ್ರಿಲ್ 1 ರಿಂದ 20% ರಷ್ಟು ನೀರು ಪೂರೈಕೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲು ಬೆಂಗಳೂರು ನೀರು ಸರಬರಾಜು ಮಂಡಳಿ ಆದೇಶಿಸಿದೆ.
ಬೆಂಗಳೂರು ಪ್ರಸ್ತುತ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದೆ. ಬೆಂಗಳೂರು 1.40 ಕೋಟಿ ಜನಸಂಖ್ಯೆಯನ್ನು ಹೊಂದಿದೆ, ಆದರೆ ನೀರು ಸರಬರಾಜು ಒಂದು ಸವಾಲಾಗಿದ್ದು ಬೆಂಗಳೂರಿನ ನಿವಾಸಿಗಳಿಗೆ ನೀರು ಒದಗಿಸಲು ಮಂಡಳಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನೀರು ಸರಬರಾಜು ಮಂಡಳಿ ತಿಳಿಸಿದೆ.