ಸಮಗ್ರ ನ್ಯೂಸ್: ಕಳೆದುಹೋದ ಮೊಬೈಲ್ ಪೋನ್ಗಳನ್ನು ಕಂಡುಹಿಡಿಯುವಲ್ಲಿ ಮತ್ತು ಮರುಪಡೆಯುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಸಿಇಐಆರ್ ಪೋರ್ಟಲ್ನಲ್ಲಿ ಮೊಬೈಲ್ ಸಾಧನಗಳ ನವೀಕರಣದಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ ಎಂದು ವರದಿಯಾಗಿದೆ.
2,06,905 ಲಕ್ಷ ಮೊಬೈಲ್ ಪೋನ್ ಪ್ರಕರಣಗಳು ಸಿಇಐಆರ್ (ಸೆಂಟ್ರಲ್ ಈಕ್ವಿಪ್ಟೆಂಟ್ ಐಡೆಂಟಿಟಿ ರಿಜಿಸ್ಟ್ರಿ) ಪೋರ್ಟಲ್ನಲ್ಲಿ ದಾಖಲಾಗಿವೆ. ಇವುಗಳಲ್ಲಿ 89,794 ಸೆಲ್ ಪೋನ್ಗಳ ಉಲ್ಲೇಖಗಳು ಕಂಡುಬಂದಿವೆ. ಪೋಲೀಸರು 29,550 ಮೊಬೈಲ್ ಗಳನ್ನು ಪತ್ತೆ ಮಾಡಿದ್ದಾರೆ. ಇದರಿಂದ ಕದ್ದ ಮೊಬೈಲ್ ಪೋನ್ ಗಳನ್ನು ವಾಪಸ್ ಪಡೆಯುವಲ್ಲಿ ಕರ್ನಾಟಕ ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎನ್ನಲಾಗಿದೆ.