Ad Widget .

ಆಸ್ತಿಗಳ ನೋಂದಣಿಗೆ ಆಧಾರ್ ಲಿಂಕ್..!ಭಾನುವಾರವೂ ತೆರೆಯಲಿದೆ ಸಬ್ ರಿಜಿಸ್ಟ್ರಾರ್ ಕಚೇರಿ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

ಸಮಗ್ರ ನ್ಯೂಸ್: ನಕಲಿ ದಾಖಲೆ ಸೃಷ್ಟಿಸಿ ಇತರರ ಆಸ್ತಿಯನ್ನು ಕಬಳಿಕೆ ಮಾಡುವ ಪ್ರಕರಣವನ್ನು ತಡೆಗಟ್ಟಲು ಆಸ್ತಿಗಳ ನೋಂದಣಿಗೆ ಆಧಾರ್ ಲಿಂಕ್ ಮಾಡಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ನನ್ನ ಆಸ್ತಿ ಎಂಬ ಯೋಜನೆಯನ್ನ ನನ್ನ ಭೂಮಿ, ನನ್ನ ಗುರುತು ಎಂಬ ಶೀರ್ಷಿಕೆಯಡಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಆಸ್ತಿ ನೋಂದಣಿ ವೇಳೆ ಆಧಾರ್ ಪಡೆಯುವ ಸೇವೆ ಆರಂಭ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Ad Widget . Ad Widget .

ಕಡ್ಡಾಯ ಮಾಡುವುದಕ್ಕೆ ಆಗುವುದಿಲ್ಲ, ಆದರೆ ನೋಂದಣಿ ಮಾಡಬೇಕಾಗುತ್ತದೆ. ನೋಂದಣಿ ಸಮಯದಲ್ಲೂ ಆಧಾರ್ ನಂಬರ್ ಕೇಳುತ್ತೇವೆ. ಆಧಾರ್ ಜೋಡಣೆ ಮಾಡುವುದರಿಂದ ನಕಲು ತಡೆಯಬಹುದು. ಸುಪ್ರೀಂ ಕೋರ್ಟ್ ಪ್ರಕಾರ ಕಡ್ಡಾಯ ಮಾಡಲು‌ ಆಗುವುದಿಲ್ಲ. ಜಾಗರೂಕತೆಯಿಂದ ರಿಜಿಸ್ಟರ್ ಮಾಡಲು ಅನುಕೂಲ‌ ಆಗಲಿದೆ ಎಂದರು. ಖಾತೆ ಮಾಡುವಾಗಲೂ ಆಧಾರ್ ಕಾರ್ಡ್​ ಅಳವಡಿಸಿಕೊಳ್ಳುತ್ತೇವೆ ಎಂದರು.

Ad Widget . Ad Widget .

ಇನ್ನೂ ಇದೇ ವಿಚಾರವಾಗಿ ಭಾನುವಾರವೂ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಮಾಡಲು ನಿರ್ಧಾರ ಮಾಡಲಾಗಿದೆ, ಪ್ರತಿ ಜಿಲ್ಲೆಯಲ್ಲೂ ಭಾನುವಾರ ಒಂದೊಂದು ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್ ಮಾಡಲಾಗುವುದು. ಸದ್ಯ ಕಾರ್ಪೊರೇಷನ್‌ ಇರುವ ಜಿಲ್ಲೆಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್‌ ಇದೆ. ಏಪ್ರಿಲ್ ನಂತರ ಮಹಾನಗರಗಳ ವ್ಯಾಪ್ತಿಯಲ್ಲೂ ಯೋಜನೆ ಜಾರಿ ಮಾಡುತ್ತೇವೆ. ಭಾನುವಾರ ಕೆಲಸ ಮಾಡಿದವರಿಗೆ ಮಂಗಳವಾರ ರಜೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Leave a Comment

Your email address will not be published. Required fields are marked *