Ad Widget .

ಉಪ್ಪಿನಂಗಡಿ: ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ

ಸಮಗ್ರ ನ್ಯೂಸ್ : ಉಪ್ಪಿನಂಗಡಿಯ ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಕರಂಬಾರು ಸುದೆಪಿಲ ಸಮೀಪದ ನೇತ್ರಾವತಿಯಲ್ಲಿ ಮತ್ತೆ ಕಂಡು ಬಂದಿದೆ.

Ad Widget . Ad Widget .

ನೇತ್ರಾವತಿಯಲ್ಲಿ ಹಾಯಾಗಿ ತಿರುಗಾಡುತ್ತಿರುವ ಆನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ಈ ಆನೆ ಕೊಯ್ಯೂರು, ಕಣಿಯೂರು ದಾಟಿ ಮಲೆಂಗಲ್ಲು, ಪದ್ಮುಂಜ ಪೊಯ್ಯ ಮೂಲಕ ಮೊಗ್ರು ಗ್ರಾಮದ ಬುಳೇರಿಗೆ ಬಂದು ಕರಂಬಾರು ಸುದೆಪಿಲ ಸಮೀಪ ನೇತ್ರಾವತಿಯಲ್ಲಿ ಜಳಕ ಮಾಡಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚರಿಸಿದೆ.

Ad Widget . Ad Widget .

ಆದರೆ ಮತ್ತೆ ಈ ಒಂಟಿ ಸಲಗ ಎಲ್ಲಿ ಪ್ರತ್ಯಕ್ಷವಾಗಲಿದೆ ಎಂಬ ಭಯ ಸ್ಥಳೀಯರಲ್ಲಿ ಕಾಡತೊಡಗಿದೆ. ಸದ್ಯ ಆನೆಯನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಆರಂಭವಾಗಿದೆ.

Leave a Comment

Your email address will not be published. Required fields are marked *