Ad Widget .

ಕೇರಳದಲ್ಲಿನ್ನು ಪೊಲೀಸ್ ಠಾಣೆಗೆ ಅಲೆದಾಡಬೇಕಿಲ್ಲ/ ಮೊಬೈಲ್ ಅಪ್ಲೀಕೇಶನ್ ಮುಖಾಂತರ ದೂರು ಸಲ್ಲಿಕೆ

ಸಮಗ್ರ ನ್ಯೂಸ್: ಕೇರಳದಲ್ಲಿನ್ನು ಸಮಸ್ಯೆ ಉಂಟಾದರೆ ಪೋಲೀಸ್ ಠಾಣೆಗೆ ಅಲೆದಾಡಬೇಕಾಗಿಲ್ಲ. ಕೇರಳ ಪೆÇಲೀಸ್ ಇಲಾಖೆ ಪೋಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕವೇ ಪೆÇೀಲೀಸರಿಗೆ ದೂರು ಸಲ್ಲಿಸಬಹುದಾಗಿದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದೆ.

Ad Widget . Ad Widget .

ಕೇರಳ ಪೋಲಿಸ್ ಇಲಾಖೆಯ ಅಧಿಕೃತ ಅಪ್ಲಿಕೇಶನ್. ಡೌನ್‍ಲೋಡ್ ಮಾಡಿಕೊಂಡ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ, ವಿವರಗಳನ್ನು ಇಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ, ಘಟನೆಯ ಸ್ಥಳ, ದಿನಾಂಕ, ವಿವರಣೆಯನ್ನು ದಾಖಲಿಸಿ ಪೋಲೀಸ್ ಠಾಣೆ ಮಿತಿ ಮತ್ತು ದೂರು ಕಳುಹಿಸಬೇಕಾದ ಕಚೇರಿಯನ್ನು ಆಯ್ಕೆ ಮಾಡಿ ಯಾರ ವಿರುದ್ಧ ದೂರು ದಾಖಲಾಗುತ್ತಿದೆಯೋ ಅವರ ವಿವರಗಳೊಂದಿಗೆ ಇಲ್ಲಿ ದೂರನ್ನು ಸಲ್ಲಿಸಬಹುದು.

Ad Widget . Ad Widget .

ದೂರುದಾರರು ದೂರು ಸಲ್ಲಿಸಿದ ಸ್ವೀಕೃತಿ ಪತ್ರ ಕೂಡಾ ಇಲ್ಲಿ ಸಿಗಲಿದ್ದು, ಅಗತ್ಯವಿದ್ದಲ್ಲಿ ಇದನ್ನು ಡೌನ್‍ಲೋಡ್ ಮಾಡಲೂ ಅವಕಾಶ ಇದೆ ಎಂದು ಪೋಲಿಸ್ ಇಲಾಖೆ ಹೇಳಿದೆ.

Leave a Comment

Your email address will not be published. Required fields are marked *