ವಿಟ್ಲ :ಇಸ್ಪೀಟ್ ಆಟ- ಪೊಲೀಸರ ದಾಳಿ, ನಾಲ್ವರ ವಶ

ಸಮಗ್ರ ನ್ಯೂಸ್ : ಜೂಜಾಟ ಆಡುತ್ತಿದ್ದ ನಾಲ್ವರನ್ನು ವಿಟ್ಲ ಠಾಣೆ ಪೊಲೀಸರು ಬಂಧಿಸಿರುವ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಇಸ್ಪೀಟ್ ಎಲೆಗಳನ್ನು ಬಳಸಿ ಆಡುತ್ತಿದ್ದ, ಧರ್ಮರಾಜ್, ಗೋಪಾಲ ಯಾನೆ ಚಂದ್ರಶೇಖರ, ವಲಿತ್ ಕೆ ಮತ್ತು ಖಲಂದರ್ ಶಾಫಿ ಬಂಧಿತ ಆರೋಪಿಗಳು.

Ad Widget ... ..

ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ, ನೆಕ್ಕರೆ ಕಾಡು ಎಂಬಲ್ಲಿರುವ ಕಲ್ಲಿನಕೋರೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಈ ಜೂಜಾಟ ಆಡುತ್ತಿದ್ದಾಗ ವಿಟ್ಲ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದರೆಂದು ವರದಿಯಾಗಿದೆ.

Ad Widget

ದಾಳಿ ಮಾಡಿದ ಸಂದರ್ಭದಲ್ಲಿ ಸ್ಥಳದಲ್ಲಿ ಬಳಸಿದಿ, ನಗದು, ಇಸ್ಪಿಟ್ ಎಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *