Ad Widget .

ನೇರಳಕಟ್ಟೆ: ಚಿನ್ನದ ಸರ ಅಪಹರಣ-ಇಬ್ಬರ ಬಂಧನ

ಸಮಗ್ರ ನ್ಯೂಸ್: ದ್ವಿಚಕ್ರ ವಾಹನದಲ್ಲಿ ಬಂದು ನೀರು ಕೇಳಿ ಮಹಿಳೆಯ ಚಿನ್ನದ ಸರ ಅಪಹರಿಸಿದ ಇಬ್ಬರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮಾ. 5ರಂದು ಕಕುರ್ಂಜೆ ಗ್ರಾಮದ ನೇರಳಕಟ್ಟೆಯ ಗುಡ್ರಿಯಲ್ಲಿ ಅಪರಿಚಿತರು 75 ವರ್ಷ ಪ್ರಾಯದ ಬಾಬಿ ದಾಸ್ ಬಳಿ ನೀರು ಕೇಳುವ ನೆಪದಲ್ಲಿ ಮಾತನಾಡಿಸಿ 8 ಗ್ರಾಂ ತೂಕದ ಚಿನ್ನದ ಸರ ಅಪಹರಿಸಿದ್ದಾರೆ.

Ad Widget . Ad Widget .

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲುಬುರಗಿ ಅಫಜಲ್‍ಪುರ ಹಾಗರಗಿ ಮೂಲದ ಪ್ರಸ್ತುತ ಬೆಂಗಳೂರಿನ ನಿವಾಸಿ ವಿಜಯ ಕುಮಾರ್ (23), ಕುಂದಾಪುರ ನೇರಳಕಟ್ಟೆ ಹಿಲ್ಕೋಡು ಮೂಲದ ಮನೋಜ್ (27) ಬಂಧಿತ ಆರೋಪಿಗಳು.

ಮಾ. 11 ರಂದು ಬೆಳಗ್ಗೆ ನೇರಳ ಕಟ್ಟೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಸುಲಿಗೆ ಮಾಡಿದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1,50,000 ರೂ. ಎಂದು ಅಂದಾಜಿಸಲಾಗಿದೆ.

ಕುಂದಾಪುರ ವೃ.ನಿ. ಜಯರಾಮ ಡಿ. ಗೌಡ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್‍ಐಗಳಾದ ಭೀಮಾಶಂಕರ್, ನೂತನ್ ಡಿ.ಈ. ಶಂಕರನಾರಾಯಣ ಠಾಣೆ ಪಿಎಸ್‍ಐ ಶಂಭುಲಿಂಗ ಮತ್ತು ಕುಂದಾಪುರ ಉಪವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಕುಂದಾಪುರ ಉ.ವಿ. ಠಾಣೆಯ ಎಎಸ್‍ಐ ಸೀತಾರಾಮ ಮತ್ತಿತರರು ಸಹಕರಿಸಿದರು.

Leave a Comment

Your email address will not be published. Required fields are marked *