ಕೊಯಿಲ: ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್ : ಕೊಯಿಲ ಗ್ರಾಮದ ಏಣಿತ್ತಡ್ಕದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ.11ರಂದು ನಡೆದಿದೆ.

Ad Widget ... ..

ಏಣಿತ್ತಡ್ಕ ದಿ.ಈಶ್ವರ ನಾಯ್ಕರವರ ಪುತ್ರ ಉಮೇಶ್ (36 ವ.) ಆತ್ಮಹತ್ಯೆ ಮಾಡಿಕೊಂಡವರು. ಇವರು ಮಧ್ಯಾಹ್ನ ಊಟ ಮಾಡಿದ ಬಳಿಕ ಮನೆಯಿಂದ ಹೊರ ಹೋದವರು ತೋಟದಲ್ಲಿ ಕಟ್ಟಿ ಹಾಕಿದ್ದ ಕರುವಿನ ಕೊರಲಿನಿಂದ ಹಗ್ಗ ಬಿಚ್ಚಿಸಿಕೊಂಡು ಆ ಹಗ್ಗದಿಂದ ತೋಟದ ಬದಿಯಲ್ಲಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ವೇಳೆಗೆ ಮೃತರ ತಾಯಿ ತೋಟಕ್ಕೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

Ad Widget

ಉಮೇಶ್ ಅವರು ಆರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ಖಿನ್ನತೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅವರ ಸಹೋದರ ಮಹಾಲಿಂಗ ನಾಯ್ಕ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತರು ತಾಯಿ, ಪತ್ನಿ, ಓರ್ವ ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *