Ad Widget .

‘ನನ್ನ ಕ್ಷೇತ್ರದಲ್ಲಿ ನಾನೇ ಸ್ಪರ್ಧಿಸುತ್ತೇನೆ’| ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟ ನುಡಿ

ಸಮಗ್ರ ನ್ಯೂಸ್: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾನು ಈ ಬಾರಿ ಚುನಾವಣೆ ಸ್ಪರ್ಧೆ ಮಾಡೇ ಮಾಡ್ತೀನಿ ಎಂದು ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Ad Widget . Ad Widget .

ಸೀಟುಗಳನ್ನು ಕೇಳುವಾಗ ಗೊಂದಲಗಳು ಬಂದೇ ಬರುತ್ತವೆ. ಅದರ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡುತ್ತಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರು ಬಿಡುಗಡೆಯಾಗುತ್ತೆ ಎಂದು ಸಂಸದೆ ತಿಳಿಸಿದ್ದಾರೆ. ಅಲ್ಲದೆ ನಾನು ಈ ಬಾರಿ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡ್ತೀನಿ ಎಂದು ಹೇಳಿದರು.

Ad Widget . Ad Widget .

ಲೋಕಸಭೆ ಚುನಾವಣೆಗೆ ಅಭಿವೃದ್ಧಿಯ ಆಧಾರದಲ್ಲೇ ಮತ ಕೇಳುತ್ತೇವೆ, ಕಳೆದ 10 ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕೆಲಸಗಳಾಗಿವೆ, ಕೇಂದ್ರದ ಎಲ್ಲಾ ಯೋಜನೆಗಳು 90 ಶೇಕಡ ಜನತೆಯನ್ನು ತಲುಪಿದೆ. ಮೋದಿಯನ್ನು ರಾಜ್ಯದ ಜನ ಪ್ರೀತಿ ಮಾಡುತ್ತಾರೆ, ಹಲವಾರು ರೈಲ್ವೇ ನಿಲ್ದಾಣಗಳು ಅಭಿವೃದ್ಧಿಯಾಗಿವೆ, ಪ್ರಧಾನಿ ಮೋದಿ ಕರ್ನಾಟಕದ ಜನರನ್ನು ಪ್ರೀತಿಸಿದ್ದಾರೆ ಎಂದರು ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು.

Leave a Comment

Your email address will not be published. Required fields are marked *