ಸುಳ್ಯ: ಕಲ್ಮಕಾರಿನಲ್ಲಿ ಪತ್ತೆಯಾದ ಸುರಂಗ ಮಾದರಿಯ ಗುಹೆ

ಸಮಗ್ರ ನ್ಯೂಸ್: ಜೆಸಿಬಿ ಮೂಲಕ ಭೂಮಿ ಅಗೆಯುತ್ತಿರುವ ವೇಳೆ ಸುರಂಗ ಮಾದರಿಯ ಗುಹೆಯೊಂದು ಪತ್ತೆಯಾದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರು ಗ್ರಾಮದಲ್ಲಿ ನಡೆದಿದೆ.

Ad Widget ... ..

ಇಲ್ಲಿನ ಬಿಳಿಮಲೆ ಉಮೇಶ್‌ ಅವರಿಗೆ ಸೇರಿದ ಜಮೀನಿನ ರಬ್ಬರ್‌ ತೋಟದಲ್ಲಿ ಜೆಸಿಬಿ ಮೂಲಕ ಅಗೆತ ನಡೆಸುವ ವೇಳೆ ಇದು ಪತ್ತೆಯಾಗಿದೆ. ಉಮೇಶ್‌ ರಬ್ಬರ್‌ ತೋಟದಲ್ಲಿ ಅರಣ್ಯ ಕೃಷಿ ಉದ್ದೇಶದಿಂದ ಜೆಸಿಬಿಯಲ್ಲಿ ಮಣ್ಣು ತೆಗೆಯುವ ಆರಂಭಿಸಿದ್ದರು.

Ad Widget

ಪೊದೆ, ಮುಳ್ಳುಗಳಿಂದ ಕೂಡಿದ್ದ ಜಾಗದಲ್ಲಿ ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದಾಗ ಸುರಂಗ ಪತ್ತೆಯಾಗಿದ್ದು, ಒಳಭಾಗ ದೊಡ್ಡ ಗಾತ್ರದ ಸ್ನಾನದ ಹಂಡೆ ಮಾದರಿಯಲ್ಲಿದೆ, ಸುಮಾರು 6 ಅಡಿ ಆಳವಿದೆ. ಕೆತ್ತನೆ ಮೂಲಕ ನಿರ್ಮಿಸಿರುವುದು ಕಂಡುಬಂದಿದೆ. ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ಬಳಸಲು ಇದನ್ನು ನಿರ್ಮಿಸಿರಬಹುದು ಎಂದು ಶಂಕಿಸಲಾಗಿದೆ.

Leave a Comment

Your email address will not be published. Required fields are marked *