ಮಾಣಿ -ಕೋಡಾಜೆಯಲ್ಲಿ ಆ್ಯಕ್ಟೀವಾ – ಕಾರು ಢಿಕ್ಕಿ: ಇಬ್ಬರಿಗೆ ಗಾಯ

ಸಮಗ್ರ ನ್ಯೂಸ್ : ಕಾರು ಮತ್ತು ಆ್ಯಕ್ಟೀವಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಜಾಲ್ಸೂರು ಸಮೀಪದ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿಯ ಇಬ್ಬರು ಮಹಿಳೆಯರು ಗಾಯಗೊಂಡು, ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳ ತಾಲೂಕಿನ ಮಾಣಿ-ಕೊಡಾಜೆ ಎಂಬಲ್ಲಿ ಇಂದು ನಡೆದಿದೆ.

Ad Widget ... ..

ಹುಕ್ರಪ್ಪ ಪೂಜಾರಿ ಅವರ ಪುತ್ರ ಕಿಶೋರ್, ಇಬ್ಬರು ಪುತ್ರಿಯರಾದ ವಿದ್ಯಾ ಮತ್ತು ಚೈತ್ರ ಸೇರಿದಂತೆ ಮೂವರು ಕಾರಿನಲ್ಲಿ ಮಂಗಳೂರಿಗೆ ಹೋಗಿ ಮದುವೆ ಬಟ್ಟೆ ಖರೀದಿಸಿ, ಹಿಂತಿರುಗುತ್ತಿದ್ದ ವೇಳೆ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ – ಕೋಡಾಜೆ ಎಂಬಲ್ಲಿ ಮುಂಭಾಗದಿಂದ ಬರುತ್ತಿದ್ದ ಆ್ಯಕ್ಟೀವಾಗೆ ಕಾರು ಢಿಕ್ಕಿಯಾಗಿದ್ದು, ಚೈತ್ರ ಹಾಗೂ ವಿದ್ಯಾ ಅವರಿಗೆ ಸಣ್ಣಪುಟ್ಟ ಗಾಯ ಹಾಗೂ ಆ್ಯಕ್ಟೀವಾದಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರೆಲ್ಲರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದೆ.

Ad Widget

Leave a Comment

Your email address will not be published. Required fields are marked *