ಗೋಳಿತ್ತಡಿ: ಮನೆಯಿಂದ ನಗದು, ಚಿನ್ನಾಭರಣ ಕಳವು

ಸಮಗ್ರ ನ್ಯೂಸ್: ಇಲ್ಲಿನ ಗೋಳಿತ್ತಡಿಯ ನೆಬಿಸಾ ಎಂಬವರ ಮನೆಯಿಂದ ಕಳೆದ ರಾತ್ರಿ ಚಿನ್ನ ಹಾಗೂ ನಗದು ಕಳವುಗೊಂಡಿರುವ ಘಟನೆ ನಡೆದಿದೆ.

Ad Widget ... ..

ನೆಬಿಸಾ ಅವರ ಪುತ್ರಿ ಹೆರಿಗೆ ಹಿನ್ನೆಲೆಯಲ್ಲಿ ಪುತ್ರಿಯೊಂದಿಗೆ ನೆಬಿಸಾ ಹಾಗೂ ಅವರ ಅಳಿಯ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ಕಳೆದ ನಾಲ್ಕೈದು ದಿನಗಳಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಮಾ.11ರಂದು ಸಂಜೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಲಕ್ಷಾಂತರ ರೂ ಮೌಲ್ಯ ದ ಚಿನ್ನ ಹಾಗೂ ನಗದು ಕಳವುಗೊಂಡಿರುವುದಾಗಿ ವರದಿಯಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Leave a Comment

Your email address will not be published. Required fields are marked *