Ad Widget .

ಮಂಗಳೂರಿನಲ್ಲಿ ಅಮಾನವೀಯ ಘಟನೆ: ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಹೊಡೆದ ಸೊಸೆ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ, ವೃದ್ಧ ಮಾವನಿಗೆ ವಾಕಿಂಗ್ ಸ್ಟಿಕ್​​ನಲ್ಲಿ ಸೊಸೆ ಹೊಡೆದಿರುವಂತಹ ವಿಡಿಯೋ ಇದೀಗ ಬೆಳಕಿಗೆ ಬಂದಿದೆ.

Ad Widget . Ad Widget .

ಮಾರ್ಚ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ (76) ಎಂಬುವವರು ಹಲ್ಲೆಗೊಳಗಾದವರು, ಇವರ ಮಗ
ಪ್ರೀತಂ. ಇವರು ವಿದೇಶದಲ್ಲಿ ಕೆಲಸದಲ್ಲಿದ್ದಾರೆ, ಆದರೆ ಮನೆಯಲ್ಲಿ ಸಿಸಿಟಿವಿಯನ್ನು ತನ್ನ ಮೊಬೈಲಿಗೆ ಕನೆಕ್ಟ್‌ ಮಾಡಿದ್ದರು. ತನ್ನ ಪತ್ನಿ ಉಮಾಶಂಕರಿ ಅವರು ಎರಡು ದಿನಗಳ ಹಿಂದೆ ವಾಕಿಂಗ್‌ ಸ್ಟಿಕ್‌ನಲ್ಲಿ ತಂದೆ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿ ಮುಖಾಂತರ ಗಮನಕ್ಕೆ ಬಂದಿದೆ. ಅದರಂತೆ ಪ್ರೀತಂ ಸುವರ್ಣ ತನ್ನ ತಂಗಿ ಮೂಡಬಿದಿರೆಯಲ್ಲಿ ಗಂಡನ ಮನೆಯಲ್ಲಿರುವ ಇರುವ ಪ್ರಿಯಾ ಎಂಬುವವರಿಗೆ ವಿಷಯ ತಿಳಿಸಿದ್ದರು.

Ad Widget . Ad Widget .

ಆರೋಪಿ ಮಹಿಳೆ ಉಮಾ ಶಂಕರಿ ಅವರು ಕೆಇಬಿ ಅತ್ತಾವರದಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾರೆ. ಸರಕಾರಿ ಹುದ್ದೆ ಇಂತಹ ಅಹಂಕಾರಕ್ಕೆ ಕಾರಣವಾಯಿತ್ತಾ ಎಂಬ ಪ್ರಶ್ನೆ ಕಾಡತೊಡಗಿದೆ. ಇದೀಗ ಸಿಸಿಟಿವಿ ಆಧರಿಸಿ ಪತಿ ಠಾಣೆಗೆ ದೂರು ನೀಡಿದ್ದು, ಕಂಕನಾಡಿ ಪೊಲೀಸರಿಂದ ಉಮಾಶಂಕರಿಯನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *