ತೆಲುಗು ಹೀರೋಗಳ ಫ್ಯಾನ್ಸ್ ಗಳ ನಡುವೆ ಬಡಿದಾಟ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ತೆಲುಗು ಹೀರೋಗಳ ನಡುವಿನ ಅಭಿಮಾನಿಗಳ ನಡುವೆ ಬಡಿದಾಟ ನಡೆದಿದೆ. ನಟ ಅಲ್ಲು ಅರ್ಜುನ್​ ಮತ್ತು ಪ್ರಭಾಸ್ ಫ್ಯಾನ್ಸ್ ಗಳ ನಡುವೆ ಹೊಡೆದಾಟ ಆಗಿದ್ದು, ಬೆಂಗಳೂರಿನ ಕೆ. ಆರ್. ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Ad Widget ... ..

ಯುವಕರ ನಡುವಿನ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ವಿಡಿಯೋವನ್ನು ಎಕ್ಸ್​​ನಲ್ಲಿ ಪೋಸ್ಟ್​ ಮಾಡಿ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

Ad Widget

ಅಲ್ಲು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್​ ಫ್ಯಾನ್ ಎನ್ನಲಾದ ಓರ್ವ ಯುವಕನಿಗೆ ಅಲ್ಲು ಅರ್ಜುನ್​ ಅಭಿಮಾನಿಗಳು ಗುಂಪು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಜೈ ಅಲ್ಲು ಅರ್ಜುನ್ ಅಂತ ಹೇಳು ಬಿಟ್ಟು ಬಿಡ್ತೇವೆ, ಇಲ್ಲ ಎಂದರೇ ಇನ್ನು ಹೊಡೆತ ಬೀಳುತ್ತೆ ಅಂತ ಹೇಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಯುವಕನ ಮುಖದಿಂದ ರಕ್ತ ಸೋರುತ್ತಿದ್ದರು ಬಿಡದ ಯುವಕರ ಗುಂಪು ಆತನಿಗೆ ಹಿಗ್ಗಾಮಗ್ಗಾ ಥಳಿಸಿದ್ದು, ಆತ ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೂ ಆತನ ಶರ್ಟ್​ ಹಿಡಿದು ಥಳಿಸಲಾಗಿದೆ. ಈ ಪ್ರಕರಣವನ್ನು ಪೊಲೀಸರು ದಾಖಲಿಸಿ ಪರಿಶೀಲಿಸುತ್ತಿದ್ದಾರೆ.

Leave a Comment

Your email address will not be published. Required fields are marked *