Ad Widget .

ಚಿಕ್ಕಬಳ್ಳಾಪುರ: ವರನ ಮುಯ್ಯಿ ಹಣಕ್ಕೆ ಕಣ್ಣು ಹಾಕಿದ ಖದೀಮರು

ಸಮಗ್ರ ನ್ಯೂಸ್: ಮದುವೆಗಳಲ್ಲಿ ಮುಯ್ಯಿ ಕೊಟ್ಟು ಹಾರೈಸುವುದು ಸಂಪ್ರದಾಯ. ಅದೇ ರೀತಿ ಇಲ್ಲೊಂದು ಪ್ರತಿಷ್ಠಿತ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದಿದೆ.ಈ ಮದುವೆ ಕಾರ್ಯಕ್ರಮದಲ್ಲಿ ವರನ ಮುಯ್ಯಿ ಹಣಕ್ಕೆ ಕಣ್ಣು ಹಾಕಿದ ಖದೀಮರು ಮುಯ್ಯಿ ಹಣವಿದ್ದ ಬ್ಯಾಗ್ ಅನ್ನೇ ಕದ್ದು ಹೋಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Ad Widget . Ad Widget .

ಚಿಕ್ಕಬಳ್ಳಾಪುರ ತಾಲ್ಲೂಕು, ಚದಲಪುರ ಗ್ರಾಮದ ಪ್ರಗತಿಪರ ರೈತ ಮುನಿರಾಜು ಎನ್ನುವವರು ಕಳೆದ ಫೆಬ್ರವರಿ 18-19 ರಂದು ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯಲ್ಲಿರುವ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ತಮ್ಮ ಮಗನ ಅದ್ದೂರಿ ಮದುವೆ ಮಾಡಿದ್ದರು. ಆರತಕ್ಷತೆ ಸಂದರ್ಭದಲ್ಲಿ ಬಂಧು-ಬಳಗ, ನೆಂಟರಿಷ್ಟರು ಸೇರಿದಂತೆ ಗಣ್ಯರು ವರನಿಗೆ ಸುಮಾರು 4 ಲಕ್ಷ ರೂಪಾಯಿಯಷ್ಟು ಹಣವನ್ನು ಮುಯ್ಯಿ ರೂಪದಲ್ಲಿ ಹಾಕಿದ್ದರು. ಮುಯ್ಯಿ ಹಣವಿದ್ದ ಬ್ಯಾಗ್‍ನ್ನು ವರನ ತಂದೆ ಮುನಿರಾಜು ಫೆಬ್ರವರಿ 19 ರಂದು ಬೆಳಿಗ್ಗೆ 6.20ರ ಸಮಯದಲ್ಲಿ ಹಣದ ಬ್ಯಾಗ್‍ನ್ನು ಮನೆಗೆ ಕೊಂಡೊಯ್ಯಲು ಕಲ್ಯಾಣ ಮಂಟಪದಿಂದ ಹೊರಗೆ ಬಂದು ತಮ್ಮ ಕಾರಿನಲ್ಲಿಟ್ಟಿದ್ದರು. ಆದರೆ ಮನೆಯ ಬೀಗ ಅವರ ಪತ್ನಿಯ ಬಳಿ ಇದ್ದ ಕಾರಣ ಬೀಗದ ಕೀ ತೆಗೆದುಕೊಂಡು ಬರಲು ಒಳಗೆ ಹೋಗಿ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಹಣವಿದ್ದ ಬ್ಯಾಗ್ ಕಳ್ಳತನವಾಗಿದೆ.

Ad Widget . Ad Widget .

ಇದರಿಂದ ಗಾಬರಿಗೊಂಡ ಮುನಿರಾಜು ಹರ್ಷೋದಯ ಕಲ್ಯಾಣ ಮಂಟಪದ ವ್ಯವಸ್ಥಾಪಕ ಹಾಗೂ ಉಸ್ತುವಾರಿ ಬೈರೇಗೌಡ ಎನ್ನುವವರಿಗೆ ದೂರವಾಣಿ ಮೂಲಕ ಕರೆ ಮಾಡಿ ಕಳ್ಳತನದ ವಿಚಾರವನ್ನು ತಿಳಿಸಿದ್ದಾರೆ. ಕಾರ್ಯನಿಮಿತ್ತ ಮುನಿರಾಜು ಚದಲಪುರದ ಮನೆಗೆ ಹೋಗಿ ವಾಪಸ್ಸು ಕಲ್ಯಾಣಮಂಟಪದ ಬಳಿ ಉಸ್ತುವಾರಿ ಕೊಠಡಿಗೆ ಆಗಮಿಸಿದ್ದಾರೆ. ಅಷ್ಟೊತ್ತಿಗೆ ಬೈರೇಗೌಡ ಎನ್ನುವವರು ಸಿಸಿ ಟಿವಿ ರೂಂನಲ್ಲಿದ್ದರಂತೆ. ಹಣ ಕಳೆದುಕೊಂಡ ಮುನಿರಾಜು ಸಿಸಿ ಟಿವಿ ದೃಶ್ಯ ತೋರಿಸುವಂತೆ ಕಲ್ಯಾಣ ಮಂಟಪದ ಉಸ್ತುವಾರಿ ಭೈರೇಗೌಡರವರಿಗೆ ಮನವಿ ಮಾಡಿದ್ದಾರೆ.

ಆದರೆ ಕಾರು ನಿಂತಿದ್ದ ಭಾಗದಲ್ಲಿ ಕ್ಯಾಮರಾವು ಕಳ್ಳತನ ನಡೆದಿರುವ 5 ನಿಮಿಷಗಳ ಕಾಲ ಬಂದ್ ಆಗಿದೆ. ಬೈರೇಗೌಡ ಬೇಕಾಬಿಟ್ಟಿ ಉತ್ತರಿಸಿದ್ದಾನೆ. ಇದರಿಂದ ಬೈರೇಗೌಡ ಹಾಗೂ ಸಿಬ್ಬಂದಿ ಮೇಲೆ ಕಳ್ಳತನದ ಅನುಮಾನ ಮೂಡಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಬೈರೇಗೌಡ ಹಾಗೂ ಸಿಬ್ಬಂದಿ ಮೇಲೆ ಕಳ್ಳತನ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

Leave a Comment

Your email address will not be published. Required fields are marked *