Ad Widget .

ಆಸ್ಕರ್ ವೇದಿಕೆಗೆ ಬೆತ್ತಲಾಗಿ ಬಂದ ರೆಸ್ಲಿಂಗ್ ಸ್ಟಾರ್ ಜಾನ್ ಸೆನಾ!! ಒಂದು ಲಕೋಟೆಯಿಂದ ‘ಮರ್ಯಾದೆ’ ಮುಚ್ಚಿಕೊಂಡ ನಿರೂಪಕ!

ಸಮಗ್ರ ನ್ಯೂಸ್: 96ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಮಾರ್ಚ್ 10ರಂದು ನಡೆದಿದೆ. 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಮಾರ್ಚ್ 10ರಂದು ಲಾಸ್ ಎಂಜಲೀಸ್‌ನಲ್ಲಿರುವ (Oscars 2024) ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದ್ದು, ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರ ಕಂಡಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಜಾನ್ ಸೆನಾ ಅವರು ಅತ್ಯುತ್ತಮ ವಸ್ತ್ರ ವಿನ್ಯಾಸವನ್ನು ಪ್ರಸ್ತುತಪಡಿಸಲು ವೇದಿಕೆಯ ಮೇಲೆ ಬೆತ್ತಲಾಗಿ ಬಂದರು. ಇವರ ಅವತಾರ ಕಂಡು ನೆರೆದಿದ್ದ ಪ್ರೇಕ್ಷಕರು ಒಂದು ಕ್ಷಣ ಮೂಕಸ್ಮಿತರಾಗಿದ್ದಾರೆ.

Ad Widget . Ad Widget . Ad Widget .

ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಪ್ರಶಸ್ತಿಯನ್ನು ನೀಡಲು, ಜಾನ್ ಸೆನಾ ಅವರು ನಗ್ನ ಅವತಾರ ತಾಳಿದ್ದರು. ಮಾತ್ರವಲ್ಲ ಜಿಮ್ಮಿ ಕಿಮ್ಮೆಲ್‌ ಈ ಬಗ್ಗೆ ತಮಾಷೆ ಕೂಡ ಮಾಡಿದ್ದಾರೆ. “ಇದೊಂದು ಸೊಗಸಾದ ಘಟನೆ. ಪುರುಷ ದೇಹವು ತಮಾಷೆಯಲ್ಲ! ನೀವೀಗ ನಗ್ನವಾಗಿ ಕುಸ್ತಿಯಾಡಬೇಕುʼʼ ಎಂದು ಕಿಮ್ಮೆಲ್ ಅವರಿಗೆ ತಮಾಷೆ ಮಾಡಿದ್ದಾರೆ.

ಜಾನ್ ಕೇವಲ ಒಂದು ಲಕೋಟೆಯಿಂದ ತಮ್ಮ ‘ಮರ್ಯಾದೆ’ಯನ್ನು ಮುಚ್ಚಿಕೊಂಡಿದ್ದರು. ಇದಾದ ಬಳಿಕ ವೇದಿಕೆ ಬಂದು ʻವೇಷಭೂಷಣಗಳು ತುಂಬಾ ಮುಖ್ಯʼ ಎಂದು ಮಾತು ಶುರು ಮಾಡಿ, ಅತ್ಯುತ್ತಮ ವಸ್ತ್ರ ವಿನ್ಯಾಸದ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

ಅತ್ಯುತ್ತಮ ವಸ್ತ್ರ ವಿನ್ಯಾಸ ಕೆಟಗರಿ ಅಲ್ಲಿ ಹಾಲಿ ವಾಡಿಂಗ್ಟನ್ ʻಫಾರ್ ಪೂರ್ ಥಿಂಗ್ಸ್ʼ ವಿನ್ನರ್‌ ಆಗಿದೆ ಎಂದು ಘೋಷಿಸಿದರು. ಬಾರ್ಬಿಗಾಗಿ ʻಜಾಕ್ವೆಲಿನ್ ಡುರಾನ್ʼ, ʻಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್‌ʼಗಾಗಿ ಜಾಕ್ವೆಲಿನ್ ವೆಸ್ಟ್, ʻನೆಪೋಲಿಯನ್‌ʼಗಾಗಿ ಜಾಂಟಿ ಯೇಟ್ಸ್ ಮತ್ತು ʻಡೇವ್ ಕ್ರಾಸ್‌ಮನ್ʼ ಮತ್ತು ʻಒಪೆನ್‌ಹೈಮರ್‌ʼಗಾಗಿ ಎಲೆನ್ ಮಿರೋಜ್ನಿಕ್ ಈ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದವು.

ಹಾಲಿವುಡ್‌ನ ಖ್ಯಾತ ನಟ, ಜಾಗತಿಕ ಖ್ಯಾತಿ ಪಡೆದಿರುವ ಓಪನ್‌ಹೈಮರ್‌ ಸಿನಿಮಾದ ಹೀರೊ ಸಿಲಿಯನ್‌ ಮರ್ಫಿ ಅವರಿಗೆ 2024ನೇ ಸಾಲಿನ ಆಸ್ಕರ್‌ ಪ್ರಶಸ್ತಿ ದೊರೆತಿದೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಲಿಯನ್‌ ಮರ್ಫಿ ಅವರಿಗೆ ಓಪನ್‌ಹೈಮರ್‌ ಸಿನಿಮಾದ ನಟನೆಗಾಗಿ ಅತ್ಯುತ್ತನ ನಟ (Best Actor) ಪ್ರಶಸ್ತಿ ದೊರೆತಿದೆ. ಇದರೊಂದಿಗೆ ಓಪನ್‌ಹೈಮರ್‌ ಸಿನಿಮಾಗೆ ಮತ್ತೊಂದು ಜಾಗತಿಕ ಗರಿ ಮೂಡಿದಂತಾಗಿದೆ. ಈ ಬಾರಿ ಓಪನ್‌ಹೈಮರ್‌ ಸಿನಿಮಾಗೆ ಏಳು ಆಸ್ಕರ್‌ ಪ್ರಶಸ್ತಿಗಳು ದೊರೆತಿವೆ.

ಓಪನ್‌ಹೈಮರ್‌ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಅವರಿಗೂ ಆಸ್ಕರ್‌ ದೊರೆತಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಕ್ರಿಸ್ಟೋಫರ್‌ ನೋಲನ್‌ ಭಾಜನರಾಗಿದ್ದಾರೆ. ಇದೇ ಮೊದಲ ಬಾರಿಗೆ ಸಿಲಿಯನ್‌ ಮರ್ಫಿ ಅವರ ಹೆಸರು ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿತ್ತು. ಅಷ್ಟೇ ಅಲ್ಲ, ಮೊದಲ ನಾಮನಿರ್ದೇಶನದಲ್ಲೇ ಅವರು ಮೊದಲ ಆಸ್ಕರ್‌ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *