Ad Widget .

43,000 ಸಂಬಳ ತಿ0ಗಳಿಗೆ! ಈಗಲೇ ಅಪ್ಲೈ ಮಾಡಿ ಈ ಜಾಬ್ ಗೆ

ಸಮಗ್ರ ಉದ್ಯೋಗ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಸೀನಿಯರ್ ರಿಸರ್ಚ್​ ಫೆಲೋ (ನ್ಯೂರೋ ಇಮೇಜಿಂಗ್​) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್ 13, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಕೂಡಲೇ ತಮ್ಮ ರೆಸ್ಯೂಮ್​ನ್ನು ಈ ಕೆಳಗೆ ನೀಡಲಾಗಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸಿ. ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದು ಬಂಪರ್ ಅವಕಾಶವಾಗಿದೆ.

Ad Widget . Ad Widget .

ಶೈಕ್ಷಣಿಕ ಅರ್ಹತೆ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್, ಎಂ.ಟೆಕ್, ಬಯೋಟೆಕ್ನಾಲಜಿ/ಲೈಫ್​ ಸೈನ್ಸಸ್​​ನಲ್ಲಿ ಎಂ.ಎಸ್ಸಿ, ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

Ad Widget . Ad Widget .

ವಯೋಮಿತಿ:
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಮಾಸಿಕ ₹ 43,500

ಉದ್ಯೋಗದ ಸ್ಥಳ:
ಬೆಂಗಳೂರು

ಅನುಭವ:
ಅಭ್ಯರ್ಥಿಗಳು ವಿವಿಧ ಇಮೇಜ್ ಅನಾಲಿಸಿಸ್ ಸಾಫ್ಟ್‌ವೇರ್ (ಉದಾ: ಎಸ್‌ಪಿಎಂ/ಎಫ್‌ಎಸ್‌ಎಲ್/ಫ್ರೀ ಸರ್ಫರ್) ಬಳಸಿಕೊಂಡು ನ್ಯೂರೋಸೈಕಿಯಾಟ್ರಿಕ್ ಡಿಸಾರ್ಡರ್‌ಗಳಲ್ಲಿ ಮಾನವ ವಿಷಯಗಳಲ್ಲಿ ಎಂಆರ್‌ಐ ಡೇಟಾದ ವಿಶ್ಲೇಷಣೆಯನ್ನು ಒಳಗೊಂಡ ಸಂಶೋಧನಾ ಅನುಭವವನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ [email protected] ಅಥವಾ [email protected] ಗೆ ಕಳುಹಿಸಬೇಕು.

Leave a Comment

Your email address will not be published. Required fields are marked *