Ad Widget .

ಉಡುಪಿ : ಶ್ರಾದ್ದ ಪೂಜೆಯ ಕೆಲಸ ತನಗೆ ನೀಡಿಲ್ಲ ಎಂದು ಮನೆಗೆ ನುಗ್ಗಿ ಗಲಾಟೆ ಮಾಡಿದ ಅರ್ಚಕ

ಸಮಗ್ರ ನ್ಯೂಸ್: ಶ್ರಾದ್ದ ಕಾರ್ಯದ ಪೂಜೆ ತನಗೆ ನೀಡಿಲ್ಲ ಎಂದು ಸಿಟ್ಟುಗೊಂಡ ಅರ್ಚಕರೊಬ್ಬರು ಮೃತರ ಮನೆಗೆ ತೆರಳಿ ಗಲಾಟೆ ಮಾಡಿದ ಘಟನೆಯೊಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ರಾಘವೇಂದ್ರ ಎಂಬುವವರ ಮನೆಯಲ್ಲಿ ಕೆಲವು ದಿನಗಳ ಹಿಂದೆ ತಾಯಿ ಮೃತ ಪಟ್ಟಿದ್ದರು. ಮಾರ್ಚ್ 6 ರಂದು ರಾಘವೇಂದ್ರ ಅವರ ಮನೆಯಲ್ಲಿ ಮೃತರ ಶ್ರಾದ್ಧಕಾರ್ಯ ನಡೆದಿತ್ತು. ಈ ಕಾರ್ಯಕ್ರಮ ನಡೆದ ಬಳಿಕ ರಾಘವೇಂದ್ರ ಅವರ ಮನೆಗೆ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಅರ್ಚಕ ರಾಮಕೃಷ್ಣ ಪೂಜೆಯನ್ನು ಬೇರೆಯವರಿಗೆ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರಾಘವೇಂದ್ರ ಅವರ ಕುಟುಂಬವನ್ನು ಸರ್ವನಾಶ ಮಾಡುತ್ತೇನೆ ಎಂಬ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.

Ad Widget . Ad Widget .

ಜಾತಿ ನಿಂದನೆ ಮಾಡಿ ಬೆದರಿಕೆ ಒಡ್ಡಿದ ಆರೋಪ ಕೂಡಾ ವ್ಯಕ್ತವಾಗಿದ್ದು, ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅರ್ಚಕನ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *