ಮಂಗಳೂರು : ತೆಂಗಿನಕಾಯಿ ತೆಗೆಯಲು ನದಿ ನೀರಿಗೆ ಇಳಿದು ಯುವಕ ಮೃತ್ಯು

ಸಮಗ್ರ ನ್ಯೂಸ್: ತೆಂಗಿನಕಾಯಿ ತೆಗೆಯಲು ನದಿ ನೀರಿಗಿಳಿದ ಯುವಕನೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ಕಟೀಲು ಎಂಬಲ್ಲಿ ನಡೆದಿದೆ.

Ad Widget ... ..

ಮೃತ ಯುವಕನನ್ನು ಕಟೀಲು ಮೂಲದ ಅಶೋಕ್ (35) ಎಂದು ಗುರುತಿಸಲಾಗಿದೆ. ಅಶೋಕ್ ತೆಂಗಿನಕಾಯಿ ತೆಗೆಯಲು ನದಿ ನೀರಿಗೆ ಇಳಿದಿದ್ದು, ಈ ಸಂದರ್ಭ ಆಯತಪ್ಪಿ ನೀರಿಗೆ ಬಿದ್ದು ಮುಳುಗಿದ್ದಾರೆ. ಜೊತೆಯಲ್ಲಿದ್ದ ಇನ್ನೊಬ್ಬ ಯುವಕ ನೀಡಿದ ಮಾಹಿತಿಯಂತೆ ಸ್ಥಳಕ್ಕಾಗಮಿಸಿದ ಗೂಡಿನಬಳಿ ನಿವಾಸಿ, ಇಲ್ಲಿನ ಈಜುಪಟು ಜೀವರಕ್ಷಕ ತಂಡದವರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget

ಘಟನಾ ಸ್ಥಳಕ್ಕೆ ಬಜ್ಪೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಜ್ಪೆಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *