Ad Widget .

2024ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಕ್ರಿಸ್ಟಿನಾ ಪಿಸ್ಕೋವಾ

ಸಮಗ್ರ ನ್ಯೂಸ್: ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಮಿಸ್ ವರ್ಲ್ಡ್ 2024 ಕಿರೀಟವನ್ನು ಗೆದ್ದರು.

Ad Widget . Ad Widget .

ದೇಶದಾದ್ಯಂತ ಪ್ರತಿಭಾವಂತ ಮತ್ತು ಸುಂದರ ಮಹಿಳೆಯರು ಪ್ರತಿ ವರ್ಷ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಮಿಸ್ ವರ್ಲ್ಡ್’ನಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಕರ್ನಾಟಕ ಮೂಲದ ಸಿನಿ ಶೆಟ್ಟಿ ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾಗಿ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಚೆಕ್ ರಿಪಬ್ಲಿಕ್​ನ ಕ್ರಿಸ್ಟಿನಾ ಅವರಿಗೆ ಮಿಸ್ ವರ್ಲ್ಡ್ ಕಿರೀಟ ಒಲಿದಿದೆ. ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ 71ನೇ ಸಾಲಿನ ಮಿಸ್​ ವರ್ಲ್ಡ್ ಕಾರ್ಯಕ್ರಮ ನಡೆದಿದೆ.

Ad Widget . Ad Widget .

ಮಿಸ್ ವರ್ಲ್ಡ್ 2024’ ಕಾರ್ಯಕ್ರಮದಲ್ಲಿ 115 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮದಲ್ಲಿ ಕ್ರಿಸ್ಟಿನಾ ವಿನ್ನರ್ ಎಂದು ಘೋಷಣೆ ಮಾಡಲಾಯಿತು. ಈ ಮೊದಲು ಭಾರತದ ಐಶ್ವರ್ಯಾ, ಪ್ರಿಯಾಂಕಾ ಚೋಪ್ರಾ ಮೊದಲಾದವರು ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದಿದ್ದಾರೆ. ‘ಮಿಸ್ ವರ್ಲ್ಡ್’ ಸ್ಪರ್ಧೆಗೆ 12 ಜಡ್ಜ್​​ಗಳ ಪ್ಯಾನಲ್ ಇದೆ. ಬಾಲಿವುಡ್ ನಟಿ ಕೃತಿ ಸನೋನ್, ಪೂಜಾ ಹೆಗ್ಡೆ ಮೊದಲಾದವರು ಇದರ ಜಡ್ಜ್​ ಆಗಿದ್ದಾರೆ

Leave a Comment

Your email address will not be published. Required fields are marked *