ವಿಟ್ಲ: ಎರಡು ಮಕ್ಕಳ ತಾಯಿ ನಾಪತ್ತೆ – ಲವ್ ಜಿಹಾದ್ ಶಂಕೆ

ಸಮಗ್ರ ನ್ಯೂಸ್ : ವಿಟ್ಲಪಡೂರು ಗ್ರಾಮದ ಪರ್ತಿಪ್ಪಾಡಿಯ ಎರಡು ಮಕ್ಕಳ ತಾಯಿ ನಾಪತ್ತೆಯಾದ ಘಟನೆ ನಡೆದಿದೆ. ಮಹಿಳೆಯ ಪತಿ ನಿಧನ ಹೊಂದಿದ್ದು, ಈಕೆ ನಾಪತ್ತೆಯಾಗುತ್ತಿದ್ದಂತೆ ಈಕೆಯ ಪುತ್ರ 2 ದಿನಗಳ ಹಿಂದೆ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಆದರೆ ಈ ವರೆಗೆ ಮಾಹಿತಿ ದೊರೆತಿಲ್ಲ.

Ad Widget ... ..

ಈಕೆ ಸಜೀಪ ಮೂಲದ ಅನ್ಯ ಕೋಮಿಗೆ ಸೇರಿದ ನಾಲ್ಕು ಮಕ್ಕಳ ತಂದೆಯ ಜತೆಗೆ ಪರಾರಿಯಾಗಿದ್ದಾಳೆಂದು ಹಾಗೂ ವಶೀಕರಣ ಮಾಡಿ ವಿಧವೆ ಮಹಿಳೆಯನ್ನು ಬಲೆಗೆ ಬೀಳಿಸಲಾಗಿದೆ ಎಂಬ ಮಾತು ಕುಟುಂಬ ಸದಸ್ಯರಿಂದ ಆರೋಪ ಕೇಳಿ ಬರುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Ad Widget

ಅಲ್ಲದೆ ಮಹಿಳೆಯ ವಿಡಿಯೋ ಒಂದನ್ನು ಇಟ್ಟು ಕೊಂಡು ಹೆದರಿಸಿ ಲವ್ ಜಿಹಾದ್ ಗೆ ಪ್ರೆರೇಪಿಸಿದ್ದಾನೆ ಎಂದು ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದೊಂದು ಲವ್ ಜಿಹಾದ್ ಪ್ರಕರಣ, ಪೊಲೀಸ್ ಇಲಾಖೆ ತಕ್ಷಣ ಮಧ್ಯ ಪ್ರವೇಶಿಸಿ ಇದನ್ನು ತಡೆಯಬೇಕೆಂದು ಹಿಂದೂ ಪರ ಸಂಘಟನೆಗಳು ಆಗ್ರಹಿಸಿವೆ.

Leave a Comment

Your email address will not be published. Required fields are marked *