ಸಮಗ್ರ ನ್ಯೂಸ್: ಗೋಬಿ ಹಾಗೂ ಕಾಟನ್ ಕ್ಯಾಂಡಿ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಎದುರಾಗಿದೆ. ಗೋವಾದಲ್ಲಿ ಗೋಬಿ ಬ್ಯಾನ್ ಹಿನ್ನೆಲೆ ರಾಜ್ಯದಲ್ಲೂ ಬ್ಯಾನ್ ಆಗುವ ಸಾಧ್ಯತೆ ಇದೆ. ಇಗಾಗಲೇ ರಾಜ್ಯದಲ್ಲಿ ಟೆಸ್ಟಿಂಗ್ ನಡೆಯುತ್ತಿದೆ.
ಗೋಬಿ ತಯಾರಿಕೆಯಲ್ಲಿ ಬಳಸುವ ರುಚಿಕಾರಕ, ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್ ಆರೋಗ್ಯದ ಬೆಲೆ ಪರಿಣಾಮ ಬೀರುತ್ತಿದೆ. ಈ ಹಿತ ದೃಷ್ಟಿಯಿಂದ ಆಹಾರ ಸುರಕ್ಷತೆ, ಗುಣಮಟ್ಟ ಆಯುಕ್ತಾಲಯದಿಂದ ಪರೀಕ್ಷೆ ನಡೆಸಲಾಗಿದೆ.
ಗೋಬಿ ಪರೀಕ್ಷೆಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಕ್ಯಾನ್ಸರ್ ತಂದೊಡ್ಡುವ ಅಂಶಗಳು ಪತ್ತೆಯಾಗಿದೆ. ಗೋಬಿ ರುಚಿಗೆ ಬಳಸುವ ಸಾಸ್ ನಲ್ಲಿ ಡೇಂಜರಸ್ ಅಂಶಗಳು ಪತ್ತೆಯಾಗಿದೆ. ಇದನ್ನೆ ಅಂಗಡಿಗಳಲ್ಲಿ ಗೋಬಿಗೆ ಬಳಸಿ ಜನರಿಗೆ ನೀಡಲಾಗುತ್ತಿದೆ. ಶೀಘ್ರದಲ್ಲಿ ಆಯುಕ್ತಾಲಯದಿಂದ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಾಗುತ್ತದೆ.