Ad Widget .

ಬಜಪೆ: ಶಾರದೋತ್ಸವ ನಡೆಸುತ್ತಿದ್ದ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸಿದ್ಧತೆlಸಾರ್ವಜನಿಕರಿಂದ ವಿರೋಧ

ಸಮಗ್ರ ನ್ಯೂಸ್ : ಬಜಪೆ ಪೇಟೆಯಲ್ಲಿ ಐತಿಹಾಸಿಕ ಶಾರದೋತ್ಸವ ಸಹಿತ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದ ಸಾರ್ವಜನಿಕ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದ್ದು ಇದಕ್ಕೆ ವಿರೋಧ ವ್ಯಕ್ತವಾಗಿದೆ.

Ad Widget . Ad Widget .

ಸಾರ್ವಜನಿಕರು ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ವಿರೋಧ ವ್ಯಕ್ತಪಡಿಸುತ್ತಿದ್ದು, ಇಂದಿರಾ ಕ್ಯಾಂಟೀನ್ ಅನ್ನು ಬೇರೆ ಸ್ಥಳದಲ್ಲಿ ನಿರ್ಮಿಸುವಂತೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಂದಿರಾ ಕ್ಯಾಂಟಿನ್‍ಗೆ ತಾಲ್ಲೂಕು ಪಂಚಾಯಿತಿಯ ಜಾಗ ತೋರಿಸಿದರು ಆ ಜಾಗ ಬೇಡ ಕೇಂದ್ರ ಮೈದಾನದ ಬದಿಯಲ್ಲೇ ಬೇಕು ಎಂದು ಕೆಲವರು ಪಟ್ಟು ಹಿಡಿದ ಕಾರಣ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ ಆದುದರಿಂದ ಈ ಸಾರ್ವಜನಿಕ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲು ಅವಕಾಶ ನೀಡುವುದಿಲ್ಲ ಒಂದು ವೇಳೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಇದೇ ಸ್ಥಳದಲ್ಲಿ ಕ್ಯಾಂಟಿನ್ ನಡೆಸಲು ಒಪ್ಪಿಗೆ ನೀಡಿದರೆ ನಾವೆಲ್ಲ ಒಟ್ಟು ಸೇರಿ ಪ್ರತಿಭಟಿಸೋಣ ಎಂದು ಕರೆ ನೀಡಿದ ಸಂದೇಶಗಳು ವಾಟ್ಸಾಪ್ ನಲ್ಲಿ ವೈರಲ್ ಆಗಿದೆ.

Ad Widget . Ad Widget .

ಬಜಪೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ವಿಜೃಂಭಣೆಯಿಂದ ಶಾರದೋತ್ಸವ ನಡೆಯುತ್ತಿದ್ದು, ಇಲ್ಲಿ ಶಾರದಾ ಮಾತೆಗೆ ಸಮರ್ಪಿತವಾದ ಸಣ್ಣ ಗುಡಿ ಹಾಗೂ ಕಟ್ಟೆ ಇದೆ. ಹಲವು ವರ್ಷಗಳ ಹಿಂದೆ ಬಪ್ಪ ಬ್ಯಾರಿ ಟ್ಯಾಬ್ಲೋಗೆ ಕಲ್ಲು ತೂರಾಟ ನಡೆದಿದ್ದು, ಕೋಮು ಗಲಭೆ ಸಂಭವಿಸಿತ್ತು.

ಪೋಸ್ಟ್ನಲ್ಲಿ ಏನಿದೆ?
`ಬಜಪೆ ಪೇಟೆಯಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಲು ಇರುವುದು ಒಂದೇ ಮೈದಾನ. ಅದು ಕೂಡ ನಮ್ಮ ಹಿರಿಯರ ಕಾಲದಲ್ಲಿ ವಿಶಾಲವಾಗಿದ್ದ ಈ ಮೈದಾನ ಕಾಲಕ್ರಮೇಣ ಪರಿಸರದ ಕಟ್ಟಡಗಳ ಅತಿಕ್ರಮಣದಿಂದಾಗಿ ಚಿಕ್ಕದಾಗುತ್ತ ಬಂದಿದೆ. ಇದೇ ಮೈದಾನದಲ್ಲಿ ಕಾರು ಪಾರ್ಕ್ ಟೆಂಪೋ ಪಾರ್ಕ್ ಇದ್ದೂ ತಮ್ಮ ಹೊಟ್ಟೆಪಾಡಿಗಾಗಿ ದುಡಿಯುತ್ತಾ ಇದ್ದಾರೆ. ಕೇಂದ್ರ ಮೈದಾನದಲ್ಲಿ ಯಾವುದೇ ಸಮಾರಂಭ ನಡೆಯಬೇಕಿದಲ್ಲಿ ಅವರೂ ಬೇರೆ ಯಾವುದೋ ಜಾಗದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ (ಅಂದಿನ ದುಡಿಮೆಗೆ ಖೋತ) ಸಾರ್ವಜನಿಕ ಶ್ರೀ ಶಾರದೋತ್ಸವದ ಮೂರು ದಿನಗಳ ಕಾರ್ಯಕ್ರಮ ಇದೇ ಮೈದಾನದಲ್ಲಿ ನಡೆಯುತ್ತಿರುವುದು ತಮಗೆಲ್ಲ ತಿಳಿದ ವಿಚಾರ.

ಆದರೆ ಇತ್ತೀಚಿನ ದಿನಗಳಲ್ಲಿ ಈ ಮೈದಾನದಲ್ಲಿ ಇಂದಿರಾ ಕ್ಯಾಂಟಿನ್ ನಡೆಸುವ ಬಗ್ಗೆ ಬಲ್ಲ ಮೂಲಗಳಿಂದ ನಮಗೆ ತಿಳಿದು ಬಂದಿರುತ್ತದೆ. ಇಂದಿರಾ ಕ್ಯಾಂಟಿನ್‍ಗೆ ತಾಲ್ಲೂಕು ಪಂಚಾಯಿತಿಯ ಜಾಗ ತೋರಿಸಿದರು ಆ ಜಾಗ ಬೇಡ ಕೇಂದ್ರ ಮೈದಾನದ ಬದಿಯಲ್ಲೇ ಬೇಕು ಎಂದು ಕೆಲವರು ಪಟ್ಟು ಹಿಡಿದ ಕಾರಣ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ ಆದುದರಿಂದ ಈ ಸಾರ್ವಜನಿಕ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಡೆಸಲು ಅವಕಾಶ ನೀಡುವುದಿಲ್ಲ ಒಂದು ವೇಳೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಇದೇ ಸ್ಥಳದಲ್ಲಿ ಕ್ಯಾಂಟಿನ್ ನಡೆಸಲು ಒಪ್ಪಿಗೆ ನೀಡಿದರೆ ನಾವೆಲ್ಲ ಒಟ್ಟು ಸೇರಿ ಪ್ರತಿಭಟಿಸೋಣ ಈ ಒಂದು ಹೋರಾಟದಲ್ಲಿ ಎಲ್ಲಾ ಸಮಾಜ ಭಾಂದವರೂ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕಳಕಳಿಯ ವಿನಂತಿ ಮುಂದಿನ ರೂಪುರೇಷೆಗಳ ಬಗ್ಗೆ ತಿಳಿಯಲು ನಾವೆಲ್ಲ ಒಟ್ಟು ಸೇರಿ ಸಭೆಯನ್ನು ಕರೆಯೋಣ ಈ ಬಗ್ಗೆ ತಮಗೆಲ್ಲರಿಗೂ ಮಾಹಿತಿಯನ್ನು ನೀಡಲಾಗುವುದು. ಬನ್ನಿರಿ ಎಲ್ಲರೂ ಬಂದು ಕೈ ಜೋಡಿಸಿ. ನಮ್ಮ ಕೇಂದ್ರ ಮೈದಾನ ನಮ್ಮ ಹಕ್ಕು.

Leave a Comment

Your email address will not be published. Required fields are marked *