ರಾಜ್ಯ ಸಭಾ ಸದಸ್ಯೆಯಾಗಿ ಸುಧಾ ಮೂರ್ತಿ/ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸದೆ

ಸಮಗ್ರ ನ್ಯೂಸ್: ರಾಜ್ಯ ಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಸುಧಾಮೂರ್ತಿ ದೇಶದಲ್ಲೇ ಅತ್ಯಂತ ಶ್ರೀಮಂತ ಸಂಸದೆಯಾಗಲಿದ್ದಾರೆ. ಸದ್ಯ ಅವರು 5586 ಕೋಟಿ ರು.ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ಫೋಸಿಸ್‍ನಲ್ಲಿ ಅವರಿಗೆ 3.45 ಕೋಟಿ ಷೇರು ಇದೆ.

Ad Widget ... ..

ಗುರುವಾರ ಇನ್ಫೋಸಿಸ್‍ನ ಪ್ರತಿ ಷೇರಿನ ಬೆಲೆ 1617 ರು. ಇತ್ತು. ಅದರ ಆಧಾರದಲ್ಲಿ ಸುಧಾ ಅವರ ಒಟ್ಟು ಆಸ್ತಿ 5586 ಕೋಟಿ ರು. ಆಗಲಿದೆ. ಇನ್ನು ಇನ್ಫೋಸಿಸ್‍ನಲ್ಲಿ ಸಂಸ್ಥಾಪಕ ನಾರಾಯಣ ಮೂರ್ತಿ 2691 ಕೋಟಿ ರು. ಮೌಲ್ಯದ 1.66 ಕೋಟಿ ಷೇರು ಹೊಂದಿದ್ದಾರೆ.

Ad Widget

ಇದುವರೆಗೂ ಬಿಆರ್‍ಎಸ್ ಪಕ್ಷದ ಬಂಡಿ ಪಾರ್ಥಸಾರಥಿ ರೆಡ್ಡಿ 5300 ಕೋಟಿ ರು.ನೊಂದಿಗೆ ದೇಶದ ಅತ್ಯಂತ ಶ್ರೀಮಂತ ಸಂಸದರಾಗಿದ್ದರು.

Leave a Comment

Your email address will not be published. Required fields are marked *