ಚುನಾವಣಾ ಬಾಂಡ್ ವಹಿವಾಟು/ ಸುಪ್ರೀಂ ಕೋರ್ಟ್‍ನಲ್ಲಿ ಮಾ.11ಕ್ಕೆ ಎಸ್‍ಬಿಐ ಮನವಿಯ ವಿಚಾರಣೆ

ಸಮಗ್ರ ನ್ಯೂಸ್: ಚುನಾವಣಾ ಬಾಂಡ್‍ಗಳಲ್ಲಿ ನಡೆಸಿದ ವಹಿವಾಟುಗಳನ್ನು ಬಹಿರಂಗಗೊಳಿಸುವ ಕುರಿತು ಮತ್ತಷ್ಟು ಕಾಲಾವಕೋಶ ಕೋರಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಮನವಿಯನ್ನು ಸುಪ್ರೀಂ ಕೋರ್ಟ್ ಮಾ.11ಕ್ಕೆ ವಿಚಾರಣೆ ನಡೆಸಲಿದೆ. ಜೊತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ಮಾ.6ರೊಳಗೆ ಎಸ್‍ಬಿಐ ಚುನಾವಣಾ ಬಾಂಡ್ ಕುರಿತ ವಹಿವಾಟುಗಳನ್ನು ಬಹಿರಂಗ ಮಾಡಿಲ್ಲ ಎಂದು ಎಡಿಆರ್ ಎಂಬ ಎನ್‍ಜಿಒ ಸಲ್ಲಿಸಿರುವ ನ್ಯಾಯಾಂಗ ನಿಂದನಾ ಅರ್ಜಿಯನ್ನೂ ಆಲಿಸಲಿದೆ.

Ad Widget ... ..

ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಎಸ್‍ಬಿಐ ಮಾ.6ರೊಳಗೆ ಚುನಾವಣಾ ಬಾಂಡ್‍ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಬಹಿರಂಗ ಮಾಡಬೇಕು ಎಂದು ಆದೇಶಿಸಿತ್ತು. ಇದಕ್ಕೆ ಪ್ರತಿಯಾಗಿ ಮಾ.4ರಂದು ಎಸ್‍ಬಿಐ ತನಗೆ ಬಹಿರಂಗ ಮಾಡಲು ಜೂ.30ರವರೆಗೂ ಕಾಲಾವಕಾಶ ಕೋರಿ ಮನವಿ ಮಾಡಿತ್ತು. ಈ ನಡುವೆ ಎಡಿಆರ್ ಎಂಬ ಎನ್‍ಜಿಒ ಮಾ.7ರಂದು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.

Ad Widget

Leave a Comment

Your email address will not be published. Required fields are marked *