Ad Widget .

ಒಂದು ದೇಶ ಒಂದು ಚುನಾವಣೆ/ ಶೀಘ್ರದಲ್ಲಿ ವರದಿ ಸಲ್ಲಿಸಲಿರುವ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ

ಸಮಗ್ರ ನ್ಯೂಸ್: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಒಂದು ದೇಶ ಒಂದು ಚುನಾವಣೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ತಯಾರಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಿದೆ.

Ad Widget . Ad Widget .

ಪ್ರಮುಖವಾಗಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ತಯಾರಿಸುವುದು, ಸರ್ಕಾರ ಅಲ್ಪಮತಕ್ಕೆ ಕುಸಿದಾಗ ಏಕತಾ ಸರ್ಕಾರವನ್ನು ರಚಿಸುವುದು, ರಾಷ್ಟ್ರಪತಿ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನದ ಐದು ವಿಧಿಗಳನ್ನು ತಿದ್ದುಪಡಿ ಮಾಡಬೇಕೆಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬುದಾಗಿ ತಿಳಿದುಬಂದಿದೆ.

Ad Widget . Ad Widget .

ಕೇಂದ್ರ ಕಾನೂನು ಆಯೋಗ ಕೂಡ ತನ್ನ ವರದಿಯನ್ನು ಬಹುತೇಕ ಸಮಾನ ಅಂಶಗಳೊಂದಿಗೆ ತಯಾರಿಸಿದ್ದು, ಈ ಸಂಬಂಧ ಸಂವಿಧಾನದಲ್ಲಿ ಹೊಸ ಪರಿಚ್ಛೇದವನ್ನು ಅಳವಡಿಕೆ ಮಾಡುವ ಕುರಿತು ಮಾಡಿರುವ ಶಿಫಾರಸುಗಳನ್ನು ಸರ್ಕಾರಕ್ಕೆ ಶೀಘ್ರದಲ್ಲೇ ಸಲ್ಲಿಸಲು ಅಂತಿಮ ತಯಾರಿ ನಡೆಸುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಬದಲಾಗಬೇಕಿರುವ ವಿಧಿಗಳು 83 – ರಾಷ್ಟ್ರೀಯ ಸದನಗಳ ಅವದಿ ü85 – ರಾಷ್ಟ್ರಪತಿಗಳಿಂದ ಲೋಕಸಭೆಯ ವಿಸರ್ಜನೆ 172 – ರಾಜ್ಯ ಸದನಗಳ ಅವಧಿ 174 – ರಾಜ್ಯ ಸದನಗಳ ವಿಸರ್ಜನೆ 356 – ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ರಾಷ್ಟ್ರಪತಿ ನೇತೃತ್ವದಲ್ಲಿ ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡಲು ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್‍ನಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿತ್ತು.

Leave a Comment

Your email address will not be published. Required fields are marked *