Ad Widget .

ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ|ಮ್ಯಾನ್ಮಾರ್‌ನಿಂದ ಪ್ರತೀ ತಿಂಗಳು ಭಾರತಕ್ಕೆ ಬರಲಿದೆ 200 ಟನ್ ಅಡಿಕೆ

Ad Widget . Ad Widget .

ಸಮಗ್ರ ನ್ಯೂಸ್ : ಇದುವರೆಗೂ ಕಾನೂನುಬಾಹಿರವಾಗಿ ಭಾರತಕ್ಕೆ ಬರುತ್ತಿದ್ದ ಮ್ಯಾನ್ಮಾರ್ ಅಡಿಕೆ ಇನ್ನು ಮುಂದೆ ಪ್ರತೀ ತಿಂಗಳು 200 ಟನ್ ಅಡಿಕೆ ಆಮದು ಮಾಡುವ ಯೋಜನೆಯೊಂದರ ಬಗ್ಗೆ ಮಾತುಕತೆಗಳು ನಡೆಯುತ್ತಿದೆ ಎಂದು ಮ್ಯಾನ್ಮಾರ್‌ನಿಂದ ಮಾಹಿತಿ ತಿಳಿದು ಬಂದಿದೆ.

Ad Widget . Ad Widget .

ಒಮ್ಮೆ ಅಧಿಕೃತವಾದ ಮುದ್ರೆ ಅಡಿಕೆ ಆಮದಿಗೆ ಲಭ್ಯವಾದರೆ ಅಡಿಕೆ ಆಮದು ನಿಯಂತ್ರಣದ ಮೇಲೂ ಪರಿಣಾಮ ಸಾಧ್ಯತೆ ಇದೆ. ಸುದ್ದಿ ಮೂಲಗಳ ಪ್ರಕಾರ, ಮ್ಯಾನ್ಮಾರ್ ಪ್ರತಿ ತಿಂಗಳು ಸರಿಸುಮಾರು 200 ಟನ್ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡಲು ಯೋಜಿಸಿದೆ. ಅಡಿಕೆ ಗುಣಮಟ್ಟಕ್ಕಾಗಿ ಅನುಮೋದನೆ ಪಡೆಯಲು 20 ಕಂಟೇನರ್‌ನಲ್ಲಿ ಮೊದಲ ಬ್ಯಾಚ್‌ನ 17 ಟನ್‌ಗಳಷ್ಟು ಒಣಗಿದ ಅಡಿಕೆಯನ್ನು ಭಾರತಕ್ಕೆ ಸಾಗಿಸಲು ಸಿದ್ಧತೆಗಳು ನಡೆಯುತ್ತಿವೆ. ವರದಿಗಳ ಪ್ರಕಾರ ಭಾರತದ ಕಂಪನಿ ಮತ್ತು ಮ್ಯಾನ್ಮಾರ್‌ನ ಸ್ಥಳೀಯ ಅಡಿಕೆ ಬೆಳೆಗಾರರ ಸಂಘದ ಸದಸ್ಯರು ಈ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ.

ಭಾರತದ ಲ್ಯಾಕ್ಸ್ ಕಾರ್ಪೊರೇಷನ್ ಕಂ ಲಿಮಿಟೆಡ್ ಮ್ಯಾನ್ಮಾರ್‌ನಿಂದ ಮಾಸಿಕ ಆಧಾರದ ಮೇಲೆ ಅಡಿಕೆಯನ್ನು ಖರೀದಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದೆ. ಪಾವತಿ ವಿಧಾನಗಳು ಸೇರಿದಂತೆ ಆಮದು-ರಫ್ತಿನ ನಿಯಮಗಳು ಮತ್ತು ಷರತ್ತುಗಳಿಗೆ ಸಂಬAಧಿಸಿದAತೆ ಉಭಯ ದೇಶಗಳ ಪ್ರಮುಖರು ಪ್ರಸ್ತುತ ಚರ್ಚೆಯಲ್ಲಿ ತೊಡಗಿವೆ ಎಂದು ವರದಿಯಾಗಿದೆ.

ಜನವರಿಯಲ್ಲಿ, ಮ್ಯಾನ್ಮಾರ್ ಅಡಿಕೆ ಉದ್ಯಮಿಗಳ ಸಂಘವು ಒಣ ಅಡಿಕೆಯ ಮಾದರಿಯನ್ನು ಲ್ಯಾಕ್ಸ್ ಕಾರ್ಪೊರೇಷನ್ ಕಂ ಲಿಮಿಟೆಡ್ ಕಳುಹಿಸಿದೆ . ಮ್ಯಾನ್ಮಾರ್ ಸುಮಾರು 2,30,000 ಟನ್‌ಗಳಷ್ಟು ವಾರ್ಷಿಕವಾಗಿ ಅಡಿಕೆಯನ್ನು ಉತ್ಪಾದನೆಯನ್ನು ಹೊಂದಿದೆ. ಈಗ ಮ್ಯಾನ್ಮಾರ್ ಬೇಡಿಕೆ ಪೂರೈಕೆಯ ಬಳಿಕ ಹೆಚ್ಚುವರಿ ಉತ್ಪಾದನೆಯನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ. ಈ ಹಿಂದೆ ಬಾಂಗ್ಲಾದೇಶಕ್ಕೂ ರಪ್ತು ಮಾಡಿತ್ತು. ಈಗ ಭಾರತದತ್ತ ಮುಖ ಮಾಡಿದೆ.

ಇದುವರೆಗೂ ಮ್ಯಾನ್ಮಾರ್ ಅಡಿಕೆಯು ಕಳ್ಳಸಾಗಾಣಿಕೆಯ ಮೂಲಕ ಭಾರತದೊಳಕ್ಕೆ ಬರುತ್ತಿತ್ತು. ಈಗ ಅಧಿಕೃತವಾಗಿ 200 ಮೆಟ್ರಿಕ್ ಟನ್ ಪ್ರತೀ ತಿಂಗಳು ಆಮದಾಗುವ ಯೋಜನೆ ಸಿದ್ಧವಾಗುತ್ತಿದೆ ಎನ್ನುವ ವರದಿ ಅಡಿಕೆ ಬೆಳೆಗಾರರು ಯೋಚಿಸಬೇಕಾದ ವಿಷಯವಾಗಿದೆ.

Leave a Comment

Your email address will not be published. Required fields are marked *