ಕಟಪಾಡಿ: ಚಾಲಕನ ನಿರ್ಲಕ್ಷ್ಯದಿಂದ ಮೋರಿಗೆ ಬಿದ್ದ ಕಾರು

ಸಮಗ್ರ ನ್ಯೂಸ್ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮೋರಿಗೆ ಬಿದ್ದು, ಕಾರು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಮಾ.9ರ ಶನಿವಾರ ನಡೆದಿದೆ.

Ad Widget ... ..

ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಗುಜರಾತ್ ನೋಂದಣಿಯ ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್ ಹಾರಿ ಹೆದ್ದಾರಿಯ ಪಶ್ಚಿಮ ಪಾಶ್ರ್ವದ ಹೆದ್ದಾರಿಗೆ ಧುಮುಕಿದ್ದು ಬಳಿಕ ಹೆದ್ದಾರಿ ಬದಿಯ ಮೋರಿಗೆ ಬಿದ್ದಿದೆ.

Ad Widget

ಈ ಸಂದರ್ಭದಲ್ಲಿ ಯಾವುದೇ ವಾಹನ ಅಥವಾ ಜನ ಸಂಚಾರವಿಲ್ಲದ ಕಾರಣ ಸಂಭಾವ್ಯ ಹೆಚ್ಚಿನ ಅನಾಹುತ ತಪ್ಪಿದೆ. ಗಾಯಾಳು ಚಾಲಕನನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *