Ad Widget .

ಉಪ್ಪಿನಂಗಡಿ: ಶಾಲೆಗೆ ನುಗ್ಗಿದ ಕಳ್ಳರು| 1500 ರೂ.ಯೊಂದಿಗೆ ಪರಾರಿ

ಸಮಗ್ರ ನ್ಯೂಸ್: ಶಾಲೆಯ ಬೀಗ ಒಡೆದು ಕಳ್ಳರು ನುಗ್ಗಿದ ಘಟನೆ ನಿನ್ನೆ ರಾತ್ರಿ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

Ad Widget . Ad Widget .

ಶಾಲೆಯ ಕಪಾಟಿನಲ್ಲಿದ್ದ 1500 ರೂಪಾಯಿಗಳೊಂದಿಗೆ ಕಳ್ಳರು ಪರಾರಿಯಾಗಿದ್ದಾರೆ. ಇಂದು ಶಾಲೆಗೆ ಬಂದ ಮುಖ್ಯೋಪಾಧ್ಯಾಯಿನಿ ಶಾಲೆಯ ಬೀಗ ಒಡೆದಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

Ad Widget . Ad Widget .

ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಸ್ಥಳೀಯ ಪುಡಿ ಕಳ್ಳರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಲೆಯ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *