Ad Widget .

ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಪ್ರೀತಿ ಮಾಡಿದ ಹುಡುಗಿ ಬಿಟ್ಟು ಹೋಗಿದ್ದಕ್ಕೆ ನೊಂದ ಪ್ರಿಯಕರನೊಬ್ಬ ಚೂಪಾದ ಚಾಕುವಿನಿಂದ ಹೊಟ್ಟೆಗೆ ತಿವಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ನಂದಿನಿ ಲೇಔಟ್​ನಲ್ಲಿ ನಡೆದಿದೆ.

Ad Widget . Ad Widget .

ದಾವಣಗೆರೆ ಮೂಲದ ಚೇತನ್ (21) ಮೃತ ದುರ್ದೈವಿ. ಜನನಿ ಮತ್ತು ಚೇತನ್ ಇಬ್ಬರು ಕಾಲೇಜಿನಲ್ಲಿ ಓದುವ ವೇಳೆ ಪರಿಚಯವಾಗಿ ಲವ್ ಆಗಿತ್ತು. ಎರಡು ವರ್ಷದಿಂದ ಚೇತನ್​ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಷಯ ಹುಡುಗಿ ಕಡೆಯವರಿಗೆ ಗೊತ್ತಾಗಿತ್ತು. ಈ ಹಿನ್ನಲೆ ಹುಡುಗಿಯ ಚಿಕ್ಕಪ್ಪ ಚೇತನ್ ಜೊತೆ ಮದುವೆಗೆ ಒಪ್ಪಿರಲಿಲ್ಲ. ಇದಾದ ಬಳಿಕವೂ ಹಲವು ಬಾರಿ ಇಬ್ಬರು ಭೇಟಿಯಾಗಿ ಓಡಾಡಿದ್ದರು. ಮೊನ್ನೆಯಷ್ಟೇ ನಮ್ಮ ಚಿಕ್ಕಪ್ಪ ಮದುವೆಗೆ ಒಪ್ಪುತ್ತಿಲ್ಲ, ಹೀಗಾಗಿ ನೀನು ಬೇರೆ ಹುಡುಗಿ ಮದುವೆಯಾಗುವಂತೆ ಜನನಿ ಹೇಳಿದ್ದಾಳೆ. ತಾನು ಇಷ್ಟಪಟ್ಟ ಹುಡುಗಿ ದೂರವಾಗಿದಕ್ಕೆ ಮನನೊಂದಿದ್ದ ಚೇತನ್, ನಿನ್ನೆ ರಾತ್ರಿ 11 ಗಂಟೆಗೆ ಹುಡುಗಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಈ ವೇಳೆ ಜನನಿ ಸಿಗದಿದ್ರೆ, ಸಾಯುವುದಾಗಿ ಹೇಳಿದ್ದಾನೆ. ಬಳಿಕ ಜನನಿ ಕಡೆಯವರು ಚೇತನ್ ತಂದೆ-ತಾಯಿಗೆ ವಿಷಯ ತಿಳಿಸಿದ್ದಾರೆ.

Ad Widget . Ad Widget .

ಪೋಷಕರು ಬಂದು ನೋಡುವಾಗ ಚೇತನ್ ಆಟೋದಲ್ಲಿ ಬಿದ್ದಿದ್ದ. ಬಳಿಕ ನಾಗರಬಾವಿ ಖಾಸಗಿ ಆಸ್ಪತ್ರೆಗೆ ಚೇತನ್​ನನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಮೃತಪಟ್ಟಿದ್ದಾನೆ. ಈ ಹಿನ್ನಲೆ ಚೇತನ್ ಕುಟುಂಬಸ್ಥರು, ಹುಡುಗಿ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *