Ad Widget .

ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಹೀನಕೃತ್ಯ| ಸ್ವಂತ ಮಗುವನ್ನು ಕಚ್ಚಿ, ಫ್ರಿಡ್ಜ್ ನೀರು ಸುರಿದು ಚಿತ್ರಹಿಂಸೆ ನೀಡಿದ ತಾಯಿ

ಸಮಗ್ರ ನ್ಯೂಸ್: ಇತ್ತೀಚೆಗೆ ತಾಯಿಯೊಬ್ಬಳು ಮಗುವನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು ಆದ್ರೆ ಅದು ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದೋಗಿದೆ.

Ad Widget . Ad Widget .

ಮಹಿಳೆಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದ ಅಮಾನವೀಯ ಘಟನೆ ನಡೆದಿದೆ. ಪತಿ ಮೇಲಿನ ಕೋಪಕ್ಕೆ ಪ್ರಿಯಕರನೊಂದಿಗೆ ಸೇರಿ ತನ್ನ ಮೂರು ವರ್ಷದ ಮಗುವಿಗೆ ತಾಯಿ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಆಯೇಷಾ ಎಂಬಾಕೆ ಇಮ್ರಾನ್ ಖಾನ್ ಎಂಬಾತನನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗು ಜನಿಸಿದೆ. ದಂಪತಿವಿಚ್ಛೇದನ ಪಡೆದುಕೊಂಡಿದ್ದು, ಆಯೇಷಾ ತವರಿಗೆ ಹೋಗಿ ತಾಯಿ ಜೊತೆ ನೆಲೆಸಿದ್ದಾಳೆ. ಆಯೇಷಾಗೆ ಸಲೀಂ ಎಂಬ ಪ್ರಿಯಕರನೂ ಇದ್ದಾನೆ. ಅದರಂತೆ, ಪತಿ ಇಮ್ರಾನ್ ಖಾನ್ ಮೇಲಿನ ಕೋಪಕ್ಕೆ ಆಯೇಷಾ ತನ್ನ ಪ್ರಿಯಕರ ಸಲೀಂ ಜೊತೆ ಸೇರಿಕೊಂಡು ತಾನು ಹೆತ್ತ ಮಗು ಎಂದು ನೋಡದೆ ಚಿತ್ರಹಿಂಸೆ ನೀಡಿದ್ದಾಳೆ.

Ad Widget . Ad Widget .

ಮಗುವನ್ನು ಕಚ್ಚಿ, ಅದಕ್ಕೆ ಫ್ರಿಡ್ಜ್ ನೀರು ಸುರಿದು ಚಿತ್ರಹಿಂಸೆ ನೀಡಲಾಗಿದೆ. ಅಲ್ಲದೆ, ಮಗಳ ಕೈಗೆ ಸಿಗರೇಟ್​ನಿಂದ ಸುಡಲಾಗಿದೆ. ಬಳಿಕ ಈ ಮಗುವಿನ ಮೇಲೆ ಸಲೀಂ ಹಲ್ಲೆ ನಡೆಸಿದ್ದಾನೆ. ಕೆಆರ್​ಎಸ್ ಬಳಿಯ ಲಾಡ್ಜ್​ನಲ್ಲಿ ಹೋಗಿ ಮಗಳನ್ನು ನೆಲಕ್ಕೆ ಬಿಸಾಡಿರುವ ಆರೋಪವೂ ಕೇಳಿಬಂದಿದೆ. ಈ ಘಟನೆಯನ್ನು ತಂದೆಗೆ ಹೇಳಿದರೆ ತಂದೆಯ ಜೊತೆ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಭಯಗೊಂಡ ಮಗು ತಂದೆಯ ಜೊತೆ ಘಟನೆಯನ್ನು ಹೇಳಿಕೊಂಡಿರಲಿಲ್ಲ. ಕೆಲ ದಿನಗಳ ನಂತರ ಘಟನೆ ಬಗ್ಗೆ ಬಾಯಿಬಿಟ್ಟಿದ್ದು, ಇಮ್ರಾನ್ ನೀಡಿದ ದೂರಿನ ಅನ್ವಯ ಅಯೇಷಾ, ಈಕೆಯ ಪ್ರಿಯಕರ ಸಲೀಂ ಮತ್ತು ಜಬೀರ್ ಎಂಬವರ ವಿರುದ್ಧ ಜೆಜೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Comment

Your email address will not be published. Required fields are marked *