Ad Widget .

ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯಕ್ಕೆ ತುಳುನಾಡಿನಲ್ಲಿ ವಿರೋಧ

ಸಮಗ್ರ ನ್ಯೂಸ್ : ರಾಜ್ಯದಲ್ಲಿ ಶೇ.60ರಷ್ಟು ಕನ್ನಡ ಇರುವ ನಾಮಫಲಕ ಅಳವಡಿಕೆ ಕಡ್ಡಾಯಕ್ಕೆ ತುಳುನಾಡಿನಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡೇತರ ನಾಮಫಲಕ ಧ್ವಂಸಗೊಳಿಸಿ ಹೋರಾಟ ನಡೆಯುತ್ತಿರುವ ಹಿನ್ನೆಲೆ ಆಕ್ರೋಶಗೊಂಡಿರುವ ತುಳು ಭಾಷೆ ಹೋರಾಟಗಾರರು ತುಳುನಾಡಿನಲ್ಲಿ ಯಾವುದೇ ಬೋರ್ಡ್ಗೆ ಕೈ ಹಾಕದಂತೆ ಎಚ್ಚರಿಕೆ ನೀಡಿದೆ.

Ad Widget . Ad Widget .

Ad Widget . Ad Widget .

ಪ್ರೀತಿಯಿಂದ ಭಾಷೆಗಳನ್ನು ಬಳಸಬೇಕೇ ಹೊರತು ಒತ್ತಾಯದ ಹೇರಿಕೆ ಸರಿಯಲ್ಲ ಎಂದು ತುಳು ಹೋರಾಟಗಾರ ರೋಷನ್ ರೇನಾಲ್ಡ್ ಹೇಳಿದ್ದಾರೆ. ಸರ್ಕಾರದ ಕಡತಗಳಲ್ಲೇ ಇಂಗ್ಲೀಷ್ ಇದೆ. ಇವರು ಮೊದಲು ಅದನ್ನೆಲ್ಲಾ ತೆಗೆಯಲಿ ಎಂದರು.

ಬೋರ್ಡ್ಗಳನ್ನು ಒಡೆಯುವುದು ಒಂದು ದಂಧೆ. ಬೋರ್ಡ್ ಮಾಡುವ ಅಂಗಡಿಗಳಿAದ ಇವರಿಗೆ ಫಂಡಿAಗ್ ಆಗುತ್ತಿದೆ. ತುಳುವರು ಯಾವತ್ತು ಭಾಷೆಗಳ ವಿರೋಧಿಗಳಲ್ಲ. ತುಳು ಭಾಷೆ ರಾಜ್ಯದ ಎರಡನೇ ಭಾಷೆ ಆಗಬೇಕೆಂದು ಎರಡು ವರ್ಷಗಳಿಂದ ಕೇಳುತ್ತಿದ್ದೇವೆ. ಪಂಚದ್ರಾವಿಡ ಭಾಷೆಗಳಲ್ಲಿ ತುಳು ಭಾಷೆಯೂ ಒಂದು. ಎಲ್ಲಾ ಭಾಷೆಗಳು ಎಂಟನೇ ಪರಿಚ್ಛೇದಕ್ಕೆ ಸೇರಿವೆ. ಆದರೆ ತುಳು ಬಾಕಿ ಉಳಿದಿದೆ. ಇದರ ಬಗ್ಗೆ ನಮಗೆ ಬಹಳ ನೋವಿದೆ ಎಂದರು.

ಇಲ್ಲಿರುವ ನಾಲ್ಕೈದು ತುಳುವರು ಕನ್ನಡ ಸಂಘಟನೆ ಕಟ್ಟಿಕೊಂಡಿದ್ದಾರೆ. ಕನ್ನಡ ಉಳಿಸಬೇಕೆಂದಿದ್ದರೆ ಅವರಿಗೆ ಶಿಕ್ಷಣದಲ್ಲಿ ಉಳಿಸಬೇಕಿತ್ತು. ಕನ್ನಡ ಶಾಲೆಗಳು ಇವತ್ತು ಮುಚ್ಚುತ್ತಿದೆ. ಅದು ಬಿಟ್ಟು ವ್ಯಾಪಾರ ಮಾಡುವ ಅಂಗಡಿಗಳ ಬೋರ್ಡ್ ಒಡೆಯುವುದು ಸರಿಯಲ್ಲ. ತುಳುನಾಡಿನಲ್ಲಿ ಭಾಷೆಗಳ ನಡುವೆ ದ್ವೇಷ ಸೃಷ್ಟಿಸಿ ಜಗಳ ಪ್ರಾರಂಭಿಸುವುದನ್ನು ನಾವು ಒಪ್ಪಲ್ಲ ಎಂದರು.

ತುಳುನಾಡಿನಲ್ಲಿ ಎಲ್ಲಿಯೂ ಸಹ ಯಾವುದೇ ಬೋರ್ಡ್ಗೆ ಕೈ ಹಾಕಿದರೆ ಇದನ್ನು ಖಂಡಿಸುತ್ತೇವೆ. ಕೊರೊನಾ ಬಳಿಕ ವ್ಯಾಪಾರಿಗಳು ಕಷ್ಟದಲ್ಲಿರುವಾಗ ಇವರ್ಯಾರು ಬಂದಿಲ್ಲ. ಈಗ ಬೋರ್ಡ್ ಒಡೆದು ಹಾಕಿ ನಷ್ಟ ಮಾಡಬಾರದು. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೂರಿಸಂ ಇದೆ. ಇಲ್ಲಿಗೆ ವಿದೇಶ, ನೆರೆ ರಾಜ್ಯದಿಂದ ಪ್ರವಾಸಿಗರು ಬರುತ್ತಾರೆ. ಅವರಿಗೆಲ್ಲಾ ತೊಂದರೆ ಆಗುತ್ತದೆ ಎಂದರು.

ತುಳುವನ್ನು ವಿರೋಧ ಮಾಡುವ ತಾಕತ್ತು ಅವರಿಗಿಲ್ಲ. ಈ ಮಣ್ಣಿನ ಭಾಷೆಯನ್ನು ವಿರೋಧ ಮಾಡುವ ಯಾವುದೇ ಸಂಘಟನೆಯನ್ನು ಬಿಡುವುದಿಲ್ಲ. ಆ ಸಂಘಟನೆಗಳನ್ನು ಮಂಗಳೂರಿನಲ್ಲಿ ಇರುವುದಕ್ಕೂ ಬಿಡುವುದಿಲ್ಲ. ತುಳು ಲಿಪಿಯ ಬೋರ್ಡ್ ತೆಗೆದಿರುವ ಮಾಹಿತಿ ಈವರೆಗೂ ಬಂದಿಲ್ಲ. ತುಳು ಲಿಪಿಯ ಬೋರ್ಡ್ ಮುಟ್ಟಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇಷ್ಟು ಪರ್ಸೆಂಟ್ ಹಾಕಬೇಕು, ಹಾಕಬಾರದೆಂಬ ಒತ್ತಾಯವಿಲ್ಲ. ಇಲ್ಲಿ ಯಾವುದೇ ದ್ವೇಷವಿಲ್ಲ. ವ್ಯಾಪಾರದಲ್ಲಿ ಪರ್ಸಂಟೇಜ್ ಕೇಳುವ ಸಂಘಟನೆಗಳು ಇವೆ. ಯಾವುದೇ ಬೋರ್ಡ್ಗೆ ಕೈ ಹಾಕಿದರೆ ತುಳುವರು ಎಚ್ಚೆತ್ತುಕೊಳ್ಳುತ್ತೇವೆ. ಈ ಬಗ್ಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಪೊಲೀಸ್ ವರಿಷ್ಟಾಧಿಕಾರಿಯವರಿಗೂ ಹೇಳಿದ್ದೇವೆ. ಇದು ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಹೇಳಿದ್ದೇವೆ ಎಂದರು.

Leave a Comment

Your email address will not be published. Required fields are marked *