ಬಿಎಂಆರ್​ಸಿಎಲ್ ನಿಂದ ಮಹತ್ತರ ಕಾರ್ಯ|ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ಆರಂಭ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಎಂಆರ್​ಸಿಎಲ್ ಒಂದು ಮಹತ್ತರ ಬೆಳವಣಿಗೆಯತ್ತ ಕಾಲಿಡುತ್ತಿದೆ. ಹೌದು ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪರೀಕ್ಷೆಯು ಮುಂದಿನ ದಿನಗಳಲ್ಲಿ ನಡೆಯಲಿದು. ನಿನ್ನೆಯಿಂದ ಸಿಗ್ನಲಿಂಗ್ ಪರೀಕ್ಷೆ ನಡೆಯುತ್ತಿದೆ. ಈ ನಡುವೆ, ಬಿಎಂಆರ್​ಸಿಎಲ್​ನ ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಾರ್ಥ ಸಂಚಾರ ನಿನ್ನೆ ಸಂಜೆಯಿಂದ ಹಳದಿ ಮಾರ್ಗದಲ್ಲಿ ಆರಂಭಗೊಂಡಿದೆ. ಇದು ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಚಲಿಸುವ ರೈಲಾಗಿದೆ.

Ad Widget ... ..

ಒಟ್ಟು 18.82 ಕಿ.ಮೀ ಇರುವ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದ್ದು, ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ರೈಲು ನಿಲ್ದಾಣಗಳಿವೆ. ಈ ಹಿನ್ನಲೆ ನಿನ್ನೆ ಸಂಜೆಯಿಂದ ಟ್ರಯಲ್ ಆರಂಭಿಸಲಾಗಿದೆ. ಸಂಜೆ 6.55 ಕ್ಕೆ ಹೆಬ್ಬಗೋಡಿ ಡಿಪೋ IBL- 1 ರಿಂದ ಸಂಚಾರ ಆರಂಭಿಸಲಾಗಿದೆ. ಮೊದಲ ಹಂತದಲ್ಲಿ 6.55 ಕ್ಕೆ ವೇಗದಿಂದ ಆರಂಬಿಸಿ 25 ಕಿ.ಮೀ ಸ್ಪೀಡ್​ವರೆಗೆ ಟ್ರಯನ್ ರನ್ ಮಾಡಲಾಗಿದೆ. ಅದರಂತೆ ಸಂಜೆ 7.14 ಕ್ಕೆ ಬೊಮ್ಮಸಂದ್ರ ನಿಲ್ದಾಣವನ್ನು ತಲುಪಿದೆ. ಬಿಎಂಆರ್​ಸಿಎಲ್ ಇದೇ ರೀತಿ ಮೂರು ದಿನಗಳ ಕಾಲ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ರನ್ ಮಾಡಲಿದೆ. ಇನ್ನೂ ಒಟ್ಟು 37 ಪರೀಕ್ಷೆಗಳನ್ನು ಬಿಎಂಆರ್​ಸಿಎಲ್ ಮಾಡಲುದ್ದು, ಅದಾದ ನಂತತ ಸಾರ್ವಜನಿಕರ ಪ್ರಯಾಣಕ್ಕೆ ಚಾಲಕ ರಹಿತ ಮೆಟ್ರೋ ರೈಲು ಲಭ್ಯವಾಗಲಿದೆ

Ad Widget

Leave a Comment

Your email address will not be published. Required fields are marked *