Ad Widget .

ಸುಳ್ಯ: ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೇವಾ ನಿವೃತ್ತಿ ಹೊಂದಲಿರುವ ಪ್ರಧಾನ ಅರ್ಚಕ ಪದ್ಮನಾಭ ಭಟ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

ಸಮಗ್ರ ನ್ಯೂಸ್: ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸುದೀರ್ಘ 31 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಮಾ.12 ರಂದು ಸೇವಾ ನಿವೃತ್ತಿ ಹೊಂದಲಿರುವ ಪ್ರಧಾನ ಅರ್ಚಕ ಪದ್ಮನಾಭ ಭಟ್ ರವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವು ಮಾ.08 ರಂದು ದೇವಸ್ಥಾನದಲ್ಲಿ ನಡೆಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಪದ್ಮನಾಭ ಭಟ್ ಮತ್ತು ಚಂದ್ರಾವತಿ ಪಿ. ದಂಪತಿಗಳನ್ನು ಶಾಲು ಹೊದಿಸಿ, ಫಲ-ಪುಷ್ಪ ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಪದ್ಮನಾಭ ಭಟ್ ಅವರು ಮಾತನಾಡಿ ತಾನು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

Ad Widget . Ad Widget .

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿರ್ದೇಶಕ ಹಾಗೂ ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಶಿವಪ್ಪ ಗೌಡ ನೆಕ್ಕರೆಕಜೆ, ದ.ಕ. ಜೇನು-ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕೋಲ್ಟಾರ್, ದೇವಸ್ಥಾನದ ಆಡಳಿತಾಧಿಕಾರಿ ಶ್ಯಾಮ್ ಪ್ರಸಾದ್, ಚಂದ್ರಕಾಂತ್, ರಾಜಾರಾಮ ರಾವ್ ಉದ್ದಂಪಾಡಿ, ಮಾಧವ ಭಟ್ ಶೃಂಗೇರಿ, ದಿನೇಶ್ ಮಡ್ತಿಲ, ಅಚ್ಚುತ ಗೌಡ ಕುದುಂಗು, ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಕೃಷ್ಣಪ್ಪ ಗೌಡ ಚೆನ್ನೂರು, ವೆಂಕಪ್ಪ ಗೌಡ ಜೆ.ಟಿ, ಯಶವಂತ ಬಾರೆತ್ತಡ್ಕ, ವ್ಯ.ಸಮಿತಿಯ ಎಲ್ಲಾ ಮಾಜಿ ಸದಸ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *