ಪುತ್ತೂರು ನಗರದಲ್ಲಿ ಹದಗೆಟ್ಟ ರಸ್ತೆ: ಪ್ರತಿಭಟನೆ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ

ಸಮಗ್ರ ನ್ಯೂಸ್ :ಪುತ್ತೂರು ನಗರದ ಪ್ರಮುಖ ರಸ್ತೆಗಳು ವಾಹನ ಸಂಚಾರಕ್ಕೆ ಅಸಾಧ್ಯವಾಗಿರುವ ರೀತಿಯಲ್ಲಿ ಇದ್ದು ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ.

Ad Widget ... ..

ಪುತ್ತೂರು ಗಾಂಧಿಕಟ್ಟೆ ಬಳಿ ರಸ್ತೆ ಗುಜರಿಯಂತಾಗಿದೆ, ವಿಶ್ವಕರ್ಮ ಸಭಾಭವನದ ಬಳಿಯಲ್ಲಿ ಹದೆಗೆಟ್ಟಿರುವ ಈ ರಸ್ತೆಯನ್ನು ತಕ್ಷಣ ಸರಿಪಡಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗಿ ದುರಸ್ಥಿಗೊಳಿಸಬೇಕೆಂದು ಪುತ್ತಿಲ ಪರಿವಾರ ನಗರಸಭೆ ಪೌರಾಯುಕ್ತ ಮಧುಕುಮಾರ್ ರವರಿಗೆ ಮನವಿ ಸಲ್ಲಿಸಿದೆ.

Ad Widget

ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ. ಮುಂದಿನ ದಿವಸಗಳಲ್ಲಿ ರಸ್ತೆ ತಡೆಮಾಡಿ ಪ್ರತಿಭಟನೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ತಿಳಿಸುತ್ತಿದ್ದೇವೆ ಪುತ್ತಿಲ ಪರಿವಾರ ಮನವಿ ಸಲ್ಲಿಸಿದೆ.

ಪುತ್ತಿಲ ಪರಿವಾರದ ಪ್ರಮುಖರಾದ ಪ್ರಸಾದ್ ತಿಂಗಳಾಡಿ, ರಾಜು ಶೆಟ್ಟಿ, ರೂಪೇಶ್ ನಾಯಕ್ ಮನವಿ ಸಲ್ಲಿಸಿದರು.

Leave a Comment

Your email address will not be published. Required fields are marked *