Ad Widget .

ಉಜ್ವಲ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿ/ ಮತ್ತೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ

ಸಮಗ್ರ ನ್ಯೂಸ್: ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂಪಾಯಿ ಸಬ್ಸಿಡಿಯನ್ನು ಮುಂದಿನ ವರ್ಷ ಮಾರ್ಚ್ ತಿಂಗಳ ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಳೆದ ಅಕ್ಟೋಬರ್‍ನಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೀಡುತ್ತಿದ್ದ 200 ರೂಪಾಯಿ ಸಬ್ಸಿಡಿಯನ್ನು 300 ರೂಪಾಯಿಗೆ ಏರಿಕೆ ಮಾಡಲಾಗಿತ್ತು.

Ad Widget . Ad Widget .

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಪಿಯೂಷ್ ಗೋಯೆಲ್, 14.2 ಕೆಜಿ ಎಲ್‍ಪಿಜಿ ಸಿಲಿಂಡರ್‍ಗೆ ನೀಡುತ್ತಿದ್ದ 300 ರೂಪಾಯಿ ಸಬ್ಸಿಡಿ ಯೋಜನೆ ಲಾಭವನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಣೆಯಾಗಿದೆ. ಪ್ರತಿ ವರ್ಷಕ್ಕೆ 12 ರೀಫಿಲ್‍ಗಳಿಗೆ 14.2 ಕೆಜಿ ಸಿಲಿಂಡರ್‍ಗಳಿಗೆ 300 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಎಂದರು..

Ad Widget . Ad Widget .

2022ರ ಮೇ ತಿಂಗಳಲ್ಲಿ ಉಜ್ವಲ ಯೋಜನೆ ಫಲಾನುಭವಿಗಳಿಗೆ 200 ರೂಪಾಯಿ ಸಬ್ಸಿಡಿ ನೀಡಲು ಘೋಷಣೆ ಮಾಡಿತ್ತು. 2023ರ ಅಕ್ಟೋಬರ್ ತಿಂಗಳಲ್ಲಿ 200 ರೂಪಾಯಿ ಸಬ್ಸಿಡಿಯನ್ನು 300 ರೂಪಾಯಿಗೆ ಏರಿಕೆ ಮಾಡಿ ಬಡವರ ಮೇಲಿದ್ದ ಹಣದುಬ್ಬರದ ಹೊರೆಯನ್ನು ತಗ್ಗಿಸಲಾಗಿತ್ತು. ಇದರಿಂದ 603 ರೂಪಾಯಿಗೆ ಎಲ್‍ಪಿಜಿ ಸಿಲಿಂಡರ್ ಲಭ್ಯವಾಗುತ್ತಿತ್ತು.

ಎಲ್‍ಪಿಜಿ ಸಂಪರ್ಕವು ಗ್ರಾಮೀಣ ಮತ್ತು ವಂಚಿತ ಬಡ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಲು, ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಠೇವಣಿ-ಮುಕ್ತ ಎಲ್‍ಪಿಜಿ ಸಂಪರ್ಕಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ

Leave a Comment

Your email address will not be published. Required fields are marked *