ನೀತಿ ಸಂಹಿತೆ ಉಲ್ಲಂಘನೆ/ ಕೊನೆಗೂ ನ್ಯಾಯಾಲಯದ ಮುಂದೆ ಹಾಜರಾದ ಜಯಪ್ರದಾ

ಸಮಗ್ರ ನ್ಯೂಸ್: ಮಾಜಿ ಸಂಸದೆ ನಟಿ ಜಯಪ್ರದಾ, 2019ರ ಲೋಕಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ವಿಚಾರಣೆಗಾಗಿ ಬುಧವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.

Ad Widget ... ..

ಪ್ರಾಸಿಕ್ಯೂಷನ್ ಅಧಿಕಾರಿ ನೀರಜ್ ಕುಮಾರ್, ಜಯಪ್ರದಾ ಅವರು ತಮ್ಮ ವಕೀಲರೊಂದಿಗೆ ವಿಚಾರಣೆಗೆ ಹಾಜರಾಗಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಿದೆ ಎಂದು ತಿಳಿಸಿದ್ದಾರೆ.

Ad Widget

2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಯ ಅಭ್ಯರ್ಥಿಯಾಗಿದ್ದ ಜಯಪ್ರದಾ ಅವರು ನೀತಿ ಸಂಹಿತೆ ಜಾರಿಯಲ್ಲಿರುವಾಗ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ ಎಂದು ಕೆಮಿ ಮತ್ತು ಸ್ವರ್ ಠಾಣೆಯ ಪೆÇಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.

ಪ್ರಕರಣ ಸಂಬಂಧ ನ್ಯಾಯಾಲಯವು ಜಯಪ್ರದಾ ಅವರಿಗೆ ಹಲವಾರು ಸಮನ್ಸ್‍ಗಳನ್ನು ಮತ್ತು 7 ಜಾಮೀನು ರಹಿತ ವಾರಂಟ್‍ಗಳನ್ನು ನೀಡಿತ್ತು. ಆದರೂ ವಿಚಾರಣೆಗೆ ಹಾಜರಾಗದೇ ಇದ್ದ ಜಯಪ್ರದಾ ಅವರನ್ನು ಬಂಧಿಸಿ ಮಾರ್ಚ್ 6ರೊಳಗಾಗಿ ಕೋರ್ಟ್ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯವು ಫೆಬ್ರವರಿ 27ರಂದು ಪೆÇಲೀಸ್ ಇಲಾಖೆಗೆ ನಿರ್ದೇಶನ ನೀಡಿತ್ತು.

Leave a Comment

Your email address will not be published. Required fields are marked *