Ad Widget .

ವಿಚಾರಣೆಗೆ ಹಾಜರಾಗದ ಅರವಿಂದ್ ಕೇಜ್ರಿವಾಲ್/ ಹೊಸ ದೂರು ಸಲ್ಲಿಸಿದ ಇಡಿ

ಸಮಗ್ರ ನ್ಯೂಸ್: ಜಾರಿ ನಿರ್ದೇಶನಾಲಯ(ಇಡಿ)ವು, ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಹಲವು ಬಾರಿ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ಹೊಸ ದೂರು ಸಲ್ಲಿಸಿದೆ.

Ad Widget . Ad Widget .

ಆಮ್ ಆದ್ಮ ಪಕ್ಷದ(ಎಎಪಿ) ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ್ ಕೇಜ್ರಿವಾಲ್ ಅವರು 4 ರಿಂದ 8 ರವರೆಗಿನ ಸಮನ್ಸ್‍ಗಳನ್ನು ಗೌರವಿಸಿಲ್ಲ ಎಂದು ಈ ಹೊಸ ದೂರಿನಲ್ಲಿ ಇಡಿ ಆರೋಪಿಸಿದೆ.

Ad Widget . Ad Widget .

ಕೇಜ್ರಿವಾಲ್ ಅವರಿಗೆ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯಲ್ಲಿ ನೀಡಲಾದ ಮೊದಲ ಮೂರು ಸಮನ್ಸ್‍ಗಳಿಗೆ ಹಾಜರಾಗದ ದೆಹಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಕೋರಿ ಇಡಿ ಈ ಹಿಂದೆ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯ ಮಾರ್ಚ್ 16 ರಂದು ಈ ಪ್ರಕರಣದ ವಿಚಾರಣೆಗೆ ಪಟ್ಟಿ ಮಾಡಿದೆ.

Leave a Comment

Your email address will not be published. Required fields are marked *