Ad Widget .

ಸುಳ್ಯ: ಪ್ರೀತಿಯಿಂದ ಸಾಕಿದ ದನ ಮೈಮೇಲೆ ಬಿದ್ದು ಮಾಲೀಕ ಸಾವು

ಸಮಗ್ರ ನ್ಯೂಸ್: ತಮ್ಮದೇ ಸಾಕು ದನ ಮೈಮೇಲೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಚೊಕ್ಕಾಡಿಯಲ್ಲಿ ನಡೆದಿದೆ. ಇಲ್ಲಿನ ನಡುಗಲ್ಲು ಮನೆ ನಿವಾಸಿ ರಾಧಾಕೃಷ್ಣ ಮೃತ ದುರ್ದೈವಿ.

Ad Widget . Ad Widget .

ಇವರು ತಮ್ಮ ಸಾಕು ದನವನ್ನು ಫೆ.27 ರಂದು ಮೇಯಿಸಲು ಕಟ್ಟಿ ಹಾಕಲೆಂದು ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ಬರೆಯಲ್ಲಿ ಜಾರಿ ಬಿದ್ದ ಕಾರಣ ದನದ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಅವರ ಕೈಯಲ್ಲಿದ್ದುದರಿಂದ ಎಳೆಯಲ್ಪಟ್ಟು ದನವು ಇವರ ಮೈಮೇಲೆ ಬಿದ್ದಿದೆ. ಈ ವೇಳೆ ಅಲ್ಲಿದ್ದ ಕೊಕ್ಕೋ ಮರ ಮತ್ತು ಬರೆಯ ಮಧ್ಯದಲ್ಲಿ ಸಿಲುಕಿ ತೀವ್ರ ಗಾಯಗೊಂಡಿದ್ದರು.

Ad Widget . Ad Widget .

ವಿಷಯ ತಿಳಿದು ಅವರ ಪತ್ನಿ ಮತ್ತು ಪಕ್ಕದ ನಿವಾಸಿಯೊಬ್ಬರ ಸಹಾಯದಿಂದ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *