Ad Widget .

ಖೇಲೋ ಇಂಡಿಯಾ ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ/ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಮಾಹಿತಿ

ಸಮಗ್ರ ನ್ಯೂಸ್: ಖೇಲೋ ಇಂಡಿಯಾ ಕ್ರೀಡಾ ಸ್ಪರ್ಧೆಯಲ್ಲಿ ಪದಕ ವಿಜೇತರಾದವರು ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

Ad Widget . Ad Widget .

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಫಲವಾಗಿ, ಕ್ರೀಡಾ ವಾತಾವರಣವನ್ನು ಮತ್ತಷ್ಟು ದೃಢಪಡಿಸುವ ನಿಟ್ಟಿನಲ್ಲಿ, ಬೇರು ಹಂತದಲ್ಲೇ ಯುವ ಕ್ರೀಡಾಪಟುಗಳನ್ನು ಬೆಳೆಸಲು ಹಾಗೂ ಆ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಮಾಡಲು ಇದು ನೆರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

Ad Widget . Ad Widget .

ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯು ಕ್ರೀಡಾ ಸಚಿವಾಲಯದೊಂದಿಗೆ ಸಮಾಲೋಚಿಸಿ ಕ್ರೀಡಾಪಟುಗಳು ಸರ್ಕಾರಿ ಉದ್ಯೋಗ ಪಡೆಯಲು ಎದುರು ನೋಡುತ್ತಿರುವವರಿಗೆ ಈ ಪರಿಷ್ಕøತ ಆದೇಶ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.

ಈ ಬೇರುಮಟ್ಟದ ನಿರ್ಧಾರದಿಂದ ಖೇಲೋ ಇಂಡಿಯಾ ಗೇಮ್ಸ್, ಯೂಥ್, ಯೂನಿವರ್ಸಿಟಿ, ಪ್ಯಾರಾ ಹಾಗೂ ವಿಂಟರ್ ಗೇಮ್ಸ್ ಪದಕ ವಿಜೇತರು ಸರ್ಕಾರಿ ಉದ್ಯೋಗ ಪಡೆಯಲು ಅರ್ಹತೆಗಿಟ್ಟಿಸಿಕೊಳ್ಳಲಿದ್ದಾರೆ .ಈ ಪರಿಷ್ಕೃತ ಆದೇಶದಿಂದಾಗಿ ಭಾರವವು ಕ್ರೀಡಾ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿ ಹೊರಹೊಮ್ಮಲು ಮಹತ್ವದ್ದ ಮೈಲಿಗಲ್ಲು ಎನಿಸಲಿದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

Leave a Comment

Your email address will not be published. Required fields are marked *