Ad Widget .

ಲೋಕಸಭಾ ಚುನಾವಣೆ/ ಮತ್ತೆ ಗ್ಯಾರಂಟಿ ಅಸ್ತ್ರ ಪ್ರಯೋಗಿಸಿದ ರಾಹುಲ್

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಯುವಕರಿಗೆ 30 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ. ರೈತರು, ಯುವಕರು, ಅಸಂಘಟಿತ ವಲಯದವರು, ಯುವೋದ್ಯಮಿಗಳು ಹೀಗೆ ವಿವಿಧ ವಲಯದ ಜನರನ್ನು ಆಕರ್ಷಿಸುವಂತಹ ಗ್ಯಾರಂಟಿ ಭರವಸೆಗಳನ್ನು ಕಾಂಗ್ರೆಸ್ ನೀಡಿದ್ದು, ನರೇಂದ್ರ ಮೋದಿ ನೀಡುತ್ತಿರುವ ಗ್ಯಾರಂಟಿಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳ ಅಸ್ತ್ರ ಬಿಟ್ಟಿದೆ

Ad Widget . Ad Widget .

ಭಾರತದಲ್ಲಿ 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ತುಂಬಿಲ್ಲ. ಬಿಜೆಪಿಯವರು ಅದನ್ನೂ ತುಂಬುವುದಿಲ್ಲ. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಮಾಡುವ ಮೊದಲ ಕೆಲಸವೆಂದರೆ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಒದಗಿಸುವುದಾಗಿದೆ ಎಂದು ರಾಜಸ್ಥಾನದ ಬಾರಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು

Ad Widget . Ad Widget .

ಜೊತೆಗೆ ಪದವೀಧರರು ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಘೋಷಿಸಿದರು. ಈ ಶಿಷ್ಯವೇತನದ ಅಡಿಯಲ್ಲಿ ಯುವಕರಿಗೆ ಒಂದು ವರ್ಷ ತರಬೇತಿ ನೀಡಲಾಗುವುದು. ತರಬೇತಿ ಸಮಯದಲ್ಲಿ ರೂ.1 ಲಕ್ಷ ಸ್ಟೈಫಂಡ್ ನೀಡಲಾಗುವುದು ಎಂದರು.

ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ‘ಯುವ ರೋಶನಿ’ ಅಡಿಯಲ್ಲಿ ಜಿಲ್ಲೆಗಳಲ್ಲಿ ಸ್ಟಾರ್ಟ್ ಆಪ್ ಆರಂಭಿಸುವುದಾಗಿ ಭರವಸೆ ನೀಡಿದರು.

Leave a Comment

Your email address will not be published. Required fields are marked *