ಕಾಂಗ್ರೆಸ್‍ನಿಂದ ಸ್ವಾತಂತ್ರ್ಯ ಹರಣ|ಸತೀಶ್ ಕುಂಪಲ

ಸಮಗ್ರ ನ್ಯೂಸ್ :ತುಮಕೂರಿನಲ್ಲಿ ನಡೆಯಬೇಕಾಗಿದ್ದ ಭಯೋತ್ಪಾದನೆ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಜರಂಗದಳ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರನ್ನು ಕುಣಿಗಲ್ ನಲ್ಲಿ ಪೋಲೀಸರು ಬಂಧಿಸಿದ್ದಾರೆ.

Ad Widget ... ..

ಕಾಂಗ್ರೆಸ್ ಸರಕಾರವು ಪೋಲೀಸ್ ಇಲಾಖೆಯ ಮುಖಾಂತರ ದೇಶಭಕ್ತ ಹಿಂದೂ ಮುಖಂಡರನ್ನು ಬಂಧಿಸಿ, ಪರೋಕ್ಷವಾಗಿ ದೇಶದ್ರೋಹಿಗಳ ಪರ ನಿಲ್ಲುವಂತಹ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ದ.ಕ. ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದು, ಕಾಂಗ್ರೆಸ್ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿಯುವ ಮೂಲಕ ಸಂವಿಧಾನ ವಿರೋಧಿಯಾಗಿದೆ ಎಂದಿದ್ದಾರೆ.

Ad Widget

ಹಸಂತಡ್ಕ ಅವರ ಬಂಧನವನ್ನು ಬಜರಂಗದಳ ಖಂಡಿಸಿದ್ದು ಯಾರನ್ನು ಬಂಧಿಸಿದರೂ ಹೋರಾಟ ನಿಲ್ಲದು ಎಂದಿದ್ದಾರೆ.

Leave a Comment

Your email address will not be published. Required fields are marked *