Ad Widget .

ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು/ ಇಂದು ಮೋದಿ ಉದ್ಘಾಟನೆ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಅತೀ ದೊಡ್ಡ ನದಿ ಹೂಗ್ಲಿ ನದಿಯ ಅಡಿಯಿಂದ ಸಾಗುವ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಉದ್ಘಾಟನೆಗೆ ಸಜ್ಜಾಗಿದ್ದು, ಇಂದು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

Ad Widget . Ad Widget .

ಒಟ್ಟು 6 ನಿಲ್ದಾಣಗಳನ್ನು ಹೊಂದಿರುವ ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜೀವನಾಡಿ ಎಂದೇ ಗುರುತಿಸಿಕೊಂಡಿದೆ. ಈ ಎರಡು ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮೆಟ್ರೋ ರೈಲು ಹೂಗ್ಲಿ ನದಿಯ ನೀರಿನೊಳಗಿನಿಂದ ಸಾಗಲಿದೆ. ಒಟ್ಟು 16.6 ಕಿಲೋಮೀಟರ್ ಉದ್ದದ ಈ ರೈಲು ಮಾರ್ಗದಲ್ಲಿ, 4, 8 ಕಿಲೋಮೀಟರ್ ಹೂಗ್ಲಿ ನದಿಯ ಆಳದಿಂದ ಸಾಗಲಿದೆ.

Ad Widget . Ad Widget .

ಈ ಮೆಟ್ರೋ ರೈಲು 45 ಸೆಕೆಂಡ್ ಹೂಗ್ಲಿ ನದಿ ನೀರಿನ ಅಡಿಯಲ್ಲಿನ ಸುರಂಗದಲ್ಲಿ ಸಾಗಲಿದೆ. ಇದು ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂಡರ್ ವಾಟರ್ ಟ್ರೈನ್ ಯೋಜನೆ ಅತ್ಯುತ್ತಮ ಇಂಜಿನಿಯರಿಂಗ್‍ಗೆ ನಿದರ್ಶನವಾಗಿದ್ದು, ಈ ರೈಲು ದೇಶದ ರೈಲ್ವೆಯಲ್ಲಿನ ಅಭಿವೃದ್ಧಿಯ ಸಂಕೇತವಾಗಿದೆ. ಈ ಯೋಜನೆಯಿಂದ ಕೋಲ್ಕತಾ ಮಂದಿ ಆರಾಮವಾ ಗಿ ಪ್ರಯಾಣಿಸಹುದು. ಇದರಿಂದ ದೇಶವೇ ಹೆಮ್ಮೆ ಪಡಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈ ರೈಲು ಕೋಲ್ಕತಾ ಮೆಟ್ರೋ ಲೈನ್-2ರ ಭಾಗವಾಗಿರಲಿದೆ. ಈಸ್ಟ್ -ವೆಸ್ಟ್ ಮೆಟ್ರೋ ಎಂದು ಕರೆಸಿಕೊಳ್ಳುವ ಈ ರೈಲು ಮೊದಲನೆ ಹಂತದ ಯೋಜನೆಯಲ್ಲಿ ಸಾಲ್ಟ್ ಲೇಕ್ ಸೆಕ್ಟರ್ ನಿಂದ ಸಾಲ್ಟ್ ಲೇಕ್ ಸ್ಟೇಡಿಯಂ ವರೆಗೆ, ಎರಡನೇ ಹಂತ ಸಾಲ್ಟ್ ಲೇಕ್ ಸೆಕ್ಟರ್ ನಿಂದ ಹೌರಾ ಮೈದಾನದ ವರೆಗೆ ಇರಲಿದೆ. ಈ ರೈಲು ಗಂಟೆಗೆ 80 ಕಿ.ಮಿ ವೇಗದಲ್ಲಿ ಚಲಿಸುವ ಸಾಮಥ್ರ್ಯ ಹೊಂದಿದೆ. ನೀರಿನೊಳಗೆ ನಿರ್ಮಿಸಲಾಗುತ್ತಿರುವ ಸುರಂಗ 520 ಮೀಟರ್ ಉದ್ದ ಹಾಗೂ 30 ಮೀಟರ್ ಆಳ ಇರಲಿದೆ.

Leave a Comment

Your email address will not be published. Required fields are marked *