Ad Widget .

ಸಾರ್ವಜನಿಕ ಸ್ಥಳಗಳಲ್ಲಿರುವ ಪೋಸ್ಟರ್, ಬ್ಯಾನರ್ ತೆರವು/ ರಾಜ್ಯ ಚುನಾವಣಾ ಆಯೋಗ ಮಹತ್ವದ ಸುತ್ತೋಲೆ

ಸಮಗ್ರ ನ್ಯೂಸ್: ರಾಜ್ಯ ಚುನಾವಣಾ ಆಯೋಗವು, ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾದ ಪೋಸ್ಟರ್, ಬ್ಯಾನರ್ ತೆರವುಗೊಳಿಸುವಂತೆ ಮಹತ್ವದ ಸುತ್ತೋಲೆ ಹೊರಡಿಸಿದೆ.

Ad Widget . Ad Widget .

ಲೋಕಸಭಾ ಚುನಾವಣೆ ಘೋಷಣೆಯಾದ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳ್ಳುವುದರಿಂದ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಇರುವಂತಹ ಅನಧಿಕೃತ ಪೋಸ್ಟರ್, ಬ್ಯಾನರ್ ಇತ್ಯಾದಿಗಳನ್ನು ಕ್ರಮವಾಗಿ ಚುನಾವಣೆ ಘೋಷಣೆಯಾದ 24 ಗಂಟೆಗಳು, 48 ಗಂಟೆಗಳು ಮತ್ತು 72 ಗಂಟೆಗಳೊಳಗಾಗಿ ಉಲ್ಲೇಖ (1) ಮತ್ತು (2) ರ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತೆರವುಗೊಳಿಸಬೇಕಾಗಿರುತ್ತದೆ.

Ad Widget . Ad Widget .

ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ತಯಾರಿಸಲು ತಮ್ಮ ಹಂತದಲ್ಲಿ ತಂಡಗಳನ್ನು ಮುಂಗಡವಾಗಿ ರಚಿಸಿಕೊಂಡು, ಚುನಾವಣೆ ಘೋಷಣೆಯಾದ ತಕ್ಷಣ ಮಾಹಿತಿಯನ್ನು ಇದರೊಂದಿಗೆ ಲಗತ್ತಿಸಿರುವ ಪ್ರಪತ್ರದಲ್ಲಿ ಈ ಕಚೇರಿಯ ಇ ಮೇಲ್ ವಿಳಾಸ [email protected] [email protected] ಕ್ಕೆ ಕಳುಹಿಸುವಂತೆ ಮತ್ತು ಅದರ ಪ್ರತಿಯನ್ನು ಈ ಕಚೇರಿಗೆ ಸಲ್ಲಿಸುವಂತೆ ಉಪ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಯ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave a Comment

Your email address will not be published. Required fields are marked *