Ad Widget .

ಪಾಕ್ ಜಿಂದಾಬಾದ್ ಕೂಗಿರುವುದು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ್ದು ಸಿಲ್ಲಿ ಅಟೆಂಪ್ಟ್: ಸಚಿವ ಶರಣಪ್ರಕಾಶ್​ ಪಾಟೀಲ್

ಸಮಗ್ರ ನ್ಯೂಸ್: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರ ಮತ್ತು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ ಈ ಎರಡು ಪ್ರಕರಣಗಳ ಕುರಿತಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್​ ಪಾಟೀಲ್ ಮಾತನಾಡಿದ್ದಾರೆ. ರಾಜ್ಯದಲ್ಲಿನ ಶಾಂತಿ-ಸುವ್ಯವಸ್ಥೆ ಕದಡಲು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಸೊಪ್ಪು ಹಾಕಲ್ಲ, ಇಂತಹ ಸಿಲ್ಲಿ ಅಟೆಂಪ್ಟ್‌‌​​​​ಗಳಿಂದ ಸರ್ಕಾರ ವಿಚಲಿತವಾಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Ad Widget . Ad Widget .

ಶರಣಪ್ರಕಾಶ ಪಾಟೀಲ್​ ಅವರ ಹೇಳಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. “ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿರುವುದು ಸಿಲ್ಲಿ ಅಟೆಂಪ್ಟಾ? ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ್ದು ಸಿಲ್ಲಿ ಅಟೆಂಪ್ಟಾ? ನೂರಾರು ಜನ ಸತ್ತರೆ ಮಾತ್ರ ನಿಮ್ಮ ಪ್ರಕಾರ ಭಯೋತ್ಪಾದನಾ ದಾಳಿ. ಹತ್ತು ಜನ ಬಾಂಬ್‌ ಸ್ಫೋಟದಿಂದ ಗಾಯಗೊಂಡರೆ ನಿಮಗೆ ಸಣ್ಣ ಘಟನೆ. ಬಾಂಬ್‌ ಇಟ್ಟವನು ಬ್ರದರ್‌, ಬೆಂಕಿ ಹಚ್ಚಿದವರಿಗೆ ಅಮಾಯಕ ಅನ್ನೋ ಪಟ್ಟ ಕಟ್ಟುವ ನಿಮಗೆ, ನಿಮ್ಮ ಸಿಲ್ಲಿ ಅಟೆಂಪ್ಟ್‌‌ಗಳಿಗೆ ಕರ್ನಾಟಕದ ಜನತೆ ಇನ್ನೊಂದು ತಿಂಗಳಲ್ಲಿ ತಕ್ಕ ಉತ್ತರ ನೀಡ್ತಾರೆ” ಎಂದು ಕಿಡಿಕಾರಿದೆ.

Ad Widget . Ad Widget .

Leave a Comment

Your email address will not be published. Required fields are marked *